Publish Date: Thu, 10 Jan 2019 (10:34 IST)
Updated Date: Thu, 10 Jan 2019 (10:36 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ತಮಗೆ ಗೆಳೆಯ ಕೆಎಲ್ ರಾಹುಲ್ ಮಾಡಿದ ಸಹಾಯವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ರಾಹುಲ್ ಮತ್ತು ಮಯಾಂಕ್ ಮೊದಲಿನಿಂದಲೂ ಗೆಳೆಯರು. ಹೀಗಾಗಿ ಮಯಾಂಕ್ ತಂಡಕ್ಕೆ ಬಂದಾಗ ಖುಷಿಯಿಂದಲೇ ರಾಹುಲ್ ಸ್ವಾಗತಿಸಿದ್ದರು. ಅಷ್ಟೇ ಅಲ್ಲ, ಪ್ರತಿಭಾವಂತ ಗೆಳೆಯನಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಾಗ ನರ್ವಸ್ ಆಗದಂತೆ ನೋಡಿಕೊಂಡಿದ್ದರಂತೆ.
ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗುತ್ತಿರುವ ರಾಹುಲ್, ಮೆಲ್ಬೋರ್ನ್ ಟೆಸ್ಟ್ ಗೂ ಮೊದಲು ಮಯಾಂಕ್ ರನ್ನು ಹೊರಗೆ ಕಾಫಿ ಕುಡಿಯಲು ಕರೆದುಕೊಂಡು ಹೋಗಿ ಆಸ್ಟ್ರೇಲಿಯನ್ನರು ಹೇಗೆ ಬೌಲಿಂಗ್ ಮಾಡುತ್ತಾರೆ, ಅವರು ತಮ್ಮನ್ನು ಹೇಗೆ ಟಾರ್ಗೆಟ್ ಮಾಡಬಹುದು ಎಂದು ಪ್ಲ್ಯಾನ್ ಹೇಳಿಕೊಟ್ಟಿದ್ದರಂತೆ ರಾಹುಲ್. ಇದು ತನಗೆ ಚೆನ್ನಾಗಿ ಆಡಲು ಸಹಾಯ ಮಾಡಿತು ಎಂದು ಮಯಾಂಕ್ ಆಂಗ್ಲ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ