ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
									
										
								
																	
ಫೆಬ್ರವರಿ 24 ರಿಂದ ಎರಡು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಬಳಿಕ ಉಭಯ ತಂಡಗಳು ಐದು ಏಕದಿನ ಪಂದ್ಯ ಆಡಲಿವೆ. ಫೆ. 24 ಮತ್ತು 27 ಕ್ಕೆ ಟಿ20 ಪಂದ್ಯ ಕ್ರಮವಾಗಿ ಬೆಂಗಳೂರು ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿದೆ.
									
			
			 
 			
 
 			
			                     
							
							
			        							
								
																	ಬಳಿಕ ಮಾರ್ಚ್ 2 ರಂದು ಹೈದರಾಬಾದ್, ಮಾರ್ಚ್ 5 ರಂದು ನಾಗ್ಪುರ, ಮಾರ್ಚ್ 8 ರಂದು ರಾಂಚಿ, ಮಾರ್ಚ್ 10 ರಂದು ಮೊಹಾಲಿ ಮತ್ತು ಮಾರ್ಚ್ 13 ರಂದು ಅಂತಿಮ ಏಕದಿನ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಇದಾದ ಬಳಿಕ ಐಪಿಎಲ್ ಕ್ರೀಡಾ ಕೂಟ ನಡೆಯಲಿದೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ