Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಯಶಸ್ಸಿಗೆ ಧೋನಿ ಬೇಕು ಎಂದ ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ ಯಶಸ್ಸಿಗೆ ಧೋನಿ ಬೇಕು ಎಂದ ರೋಹಿತ್ ಶರ್ಮಾ
ಸಿಡ್ನಿ , ಶುಕ್ರವಾರ, 11 ಜನವರಿ 2019 (09:23 IST)
ಸಿಡ್ನಿ: ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ವಿಯಾಗಬೇಕಾದರೆ ಧೋನಿ ಬೇಕೇ ಬೇಕು ಎಂದು ಉಪನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರೋಹಿತ್ ‘ಧೋನಿ ತಂಡದಲ್ಲಿದ್ದರೆ ನಮಗೆಲ್ಲಾ ದಾರಿ ದೀಪವಾಗಿರುತ್ತಾರೆ. ಅವರು ಹಲವಾರು ವರ್ಷಗಳ ಕಾಲ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಅವರ ಸಲಹೆ, ತಾಳ್ಮೆಯ ಗುಣ ನಮಗೆ ದಾರಿ ದೀಪ’ ಎಂದು ರೋಹಿತ್ ಹೊಗಳಿದ್ದಾರೆ.

ಅಷ್ಟೇ ಅಲ್ಲ, ಧೋನಿ ವಿಕೆಟ್ ಹಿಂದುಗಡೆ ನಿಲ್ಲುವುದರಿಂದ ನಾಯಕನಿಗೆ ಅಗತ್ಯ ಸಲಹೆ, ಸೂಚನೆಯನ್ನು ಕೊಡುತ್ತಿರುತ್ತಾರೆ ಎಂದು ರೋಹಿತ್ ಸಮರ್ಥಿಸಿದ್ದಾರೆ. ಇನ್ನು, ಆಸ್ಟ್ರೇಲಿಯಾ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಯಾರ ಸ್ಥಾನವೂ ತಂಡದಲ್ಲಿ ಖಾಯಂ ಅಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಡಿದ್ದುಣ್ಣೋ ಮಾರಾಯ! ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ನಿಷೇಧದ ಭೀತಿ