ಮಯಾಂಕ್ ಅಗರ್ವಾಲ್ ರನ್ನು ಕೊಂಡಾಡಿದ ವಿರಾಟ್ ಕೊಹ್ಲಿ

ಮಂಗಳವಾರ, 8 ಜನವರಿ 2019 (09:26 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಗಮಿಸಿ ಅದ್ಭುತ ಬ್ಯಾಟಿಂಗ್ ಮಾಡಿದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಪಂದ್ಯದ ನಂತರ ಸಮಾರೋಪ ಸಮಾರಂಭದಲ್ಲಿ ಕೊಹ್ಲಿ ಮಯಾಂಕ್, ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿ ಕೊಂಡಾಡಿದ್ದಾರೆ.

‘ಮಯಾಂಕ್ ಅಗರ್ವಾಲ್ ಗೆ ವಿಶೇಷ ಅಭಿನಂದನೆಗಳು. ನೇರವಾಗಿ ಬಾಕ್ಸಿಂಗ್ ಡೇ ಟೆಸ್ಟ್ ನಂತಹ ಪ್ರತಿಷ್ಠಿತ ಸರಣಿಗೆ ಆಗಮಿಸಿ, ಆಸ್ಟ್ರೇಲಿಯಾದಂತಹ ಕ್ವಾಲಿಟಿ ದಾಳಿ ಎದುರು ಅದ್ಭುತವಾಗಿ ಆಡಿದ ಆತನ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು’ ಎಂದು ವಿರಾಟ್ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಆಕ್ರಮಣಕಾರಿಯಾಗಿ ಆಡಿದ ರಿಷಬ್ ಪಂತ್, ತಂಡಕ್ಕೆ ಆಧಾರಸ್ತಂಬವಾದ ಚೇತೇಶ್ವರ ಪೂಜಾರ ಬಗ್ಗೆಯೂ ಕೊಹ್ಲಿ ವಿಶೇಷವಾಗಿ ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಡ್ನಿಯಲ್ಲಿ ಇತಿಹಾಸ ಬರೆದ ವಿರಾಟ್ ಕೊಹ್ಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೀಂ ಇಂಡಿಯಾ ವಶ