Select Your Language

Notifications

webdunia
webdunia
webdunia
webdunia

ಪ್ರೇಕ್ಷಕರಿಗೆ ಬೋರ್ ಆಗದೇ ಇರಲು ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ನೃತ್ಯ ಮಾಡಿದ್ರು

ಪ್ರೇಕ್ಷಕರಿಗೆ ಬೋರ್ ಆಗದೇ ಇರಲು ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ನೃತ್ಯ ಮಾಡಿದ್ರು
ಸಿಡ್ನಿ , ಸೋಮವಾರ, 7 ಜನವರಿ 2019 (09:19 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತದ  ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಟ್ಯೂನ್ ಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ನೃತ್ಯ ಮಾಡಿ ರಂಜಿಸಿದ್ದಾರೆ.


ಹಾರ್ದಿಕ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿಲ್ಲ. ಆದರೆ ನಾಲ್ಕನೇ ದಿನದಾಟಕ್ಕೂ ಮೊದಲು ಭಾರತ್ ಆರ್ಮಿ ನುಡಿಸುತ್ತಿದ್ದ ಸೊಗಸಾದ ಮ್ಯೂಸಿಕ್ ಗೆ ಮನಸೋತ ಹಾರ್ದಿಕ್ ಮೈದಾನಕ್ಕಿಳಿದು ನೃತ್ಯ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ನಾಲ್ಕನೇ ದಿನದಾಟವೂ ಮಳೆ, ಮಂದಬೆಳಕಿನಿಂದಾಗಿ ಅರ್ಧ ದಿನದಷ್ಟು ವ್ಯರ್ಥವಾಗಿತ್ತು. ಈಗಷ್ಟೇ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ಮೈದಾನದಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಭಾರತ್ ಆರ್ಮಿ ಅವರಿಗಾಗಿ ಮ್ಯೂಸಿಕ್ ಪ್ಲೇ ಮಾಡಿದೆ. ಪಾಂಡ್ಯ ಕೂಡಾ ನಿರಾಶೆ ಮಾಡದೇ ತಮ್ಮ ನೃತ್ಯ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಗೆಲುವಿನ ಕನಸಿಗೆ ಮಳೆ ಕಾಟ