ಸಿಡ್ನಿಯಲ್ಲಿ ಇತಿಹಾಸ ಬರೆದ ವಿರಾಟ್ ಕೊಹ್ಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೀಂ ಇಂಡಿಯಾ ವಶ

ಸೋಮವಾರ, 7 ಜನವರಿ 2019 (09:43 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ಮಳೆಯಿಂದಾಗಿ ರದ್ದಾಗುವುದರೊಂದಿಗೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, 2-1 ರಿಂದ ಟೀಂ ಇಂಡಿಯಾ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.


ಭಾರೀ ಮಳೆಯಿಂದಾಗಿ ಇಂದು ಒಂದೇ ಒಂದು ಎಸೆತವೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾರತ 2-1 ರಿಂದ ಸರಣಿ ಗೆದ್ದುಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ಮಾತ್ರವಲ್ಲ, ಏಷ್ಯಾ ಖಂಡದ ಮೊದಲ ನಾಯಕ ಎಂಬ ಖ್ಯಾತಿಗೆ ವಿರಾಟ್ ಪಾತ್ರರಾದರು.

ಈ ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದರು. ಆಸ್ಟ್ರೇಲಿಯಾ ದಿಗ್ಗಜ ಅಲನ್ ಬಾರ್ಡರ್ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ನಾಯಕ ಕೊಹ್ಲಿ ತಂಡದ ಅತ್ಯಂತ ಹೊಸ ಆಟಗಾರ ಮಯಾಂಕ್ ಅಗರ್ವಾಲ್ ಕೈಗೆ ಟ್ರೋಫಿ ಒಪ್ಪಿಸಿ ಸಂಭ್ರಮಿಸಿದರು. ಭಾರತದ ಪಾಲಿಗೆ ಈ ಸರಣಿ ಸ್ಮರಣೀಯವಾಗಿತ್ತು. ಅಷ್ಟೇ ಅಲ್ಲ, ಈ ಸರಣಿ ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊನೆಗೂ ರೋಹಿತ್ ಶರ್ಮಾ ಮುದ್ದಿನ ಮಗಳ ಹೆಸರು ಬಹಿರಂಗ