ಮಗಳನ್ನು ಬಿಟ್ಟು ಒಲ್ಲದ ಮನಸ್ಸಿಂದಲೇ ಆಸ್ಟ್ರೇಲಿಯಾ ವಿಮಾನವೇರಿದ ರೋಹಿತ್ ಶರ್ಮಾ

ಮಂಗಳವಾರ, 8 ಜನವರಿ 2019 (09:37 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಡುವೆ ತಂದೆಯಾದ ರೋಹಿತ್ ಶರ್ಮಾ ಮಗಳನ್ನು ನೋಡಲು ಮುಂಬೈಗೆ ಮರಳಿದ್ದರು. ಈಗ ಟೆಸ್ಟ್ ಸರಣಿ ಮುಗಿದಿದ್ದು, ಮುಂಬರುವ ಏಕದಿನ ಸರಣಿಗಾಗಿ ಮತ್ತೆ ಮಗಳನ್ನು ಬಿಟ್ಟು ಒಲ್ಲದ ಮನಸ್ಸಿನಿಂದಲೇ ಆಸ್ಟ್ರೇಲಿಯಾ ವಿಮಾನವೇರಿದ್ದಾರೆ.


ಧೋನಿ, ಕೇದಾರ್ ಜಾದವ್, ಯಜುವೇಂದ್ರ ಚಾಹಲ್, ಅಂಬಟಿ ರಾಯುಡು, ಖಲೀಲ್ ಅಹಮ್ಮದ್, ಸೇರಿದಂತೆ ಏಕದಿನ ಸ್ಪೆಷಲಿಸ್ಟ್ ಗಳ ಜತೆಗೆ ಮುಂಬೈ ವಿಮಾನ ನಿಲ್ದಾಣದಿಂದ ರೋಹಿತ್ ಕೂಡಾ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.

ಜನವರಿ 12 ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಅದಾದ ಬಳಿಕ ನ್ಯೂಜಿಲೆಂಡ್ ಒಳಗೊಂಡ ಸೀಮಿತ ಓವರ್ ಗಳ ಸರಣಿ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಚಿನ್ ಗಿಂತಲೂ ವಿರಾಟ್ ಕೊಹ್ಲಿ ಗ್ರೇಟ್ ಎಂದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಈಗ ಟ್ವಿಟರ್ ನಲ್ಲಿ ರೋಸ್ಟ್!