Publish Date: Wed, 20 Feb 2019 (09:01 IST)
Updated Date: Wed, 20 Feb 2019 (09:03 IST)
ಬೆಂಗಳೂರು: ಹಿರಿಯ ನಟ ಅಶ್ವಥ್ ಪುತ್ರ, ಶಂಕರ್ ಅಶ್ವಥ್ ಕೆಲವು ಸಮಯದ ಹಿಂದೆ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆಂಬ ಕಾರಣಕ್ಕೆ ಸುದ್ದಿಯಾಗಿದ್ದರು. ಆದರೆ ಈಗ ಅವರು ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಿರಿಯ ನಟ ಶಂಕರ್ ಅಶ್ವಥ್ ಈಗ ನಟಿ ರಶ್ಮಿಕಾ ಮಂದಣ್ಣಗೆ ಥ್ಯಾಂಕ್ಸ್ ಹೇಳಿದ್ದಾರೆ. ಅದಕ್ಕೆ ಕಾರಣ ರಶ್ಮಿಕಾ ತಮ್ಮ ಜತೆ ನಡೆದುಕೊಂಡ ರೀತಿಗೆ.
ಶೂಟಿಂಗ್ ವೇಳೆ ತಮಗೆ ಬೆನ್ನು, ಕತ್ತು ನೋವಾದಾಗ ಅಷ್ಟು ಬೇಡಿಕೆಯ ನಟಿಯಾಗಿದ್ದರೂ ಧಿಮಾಕು ತೋರಿಸದೇ ರಶ್ಮಿಕಾ ಮಗಳಂತೆ ನೋಡಿಕೊಂಡಿದ್ದಾಳೆ. ಚಿತ್ರರಂಗಕ್ಕೆ ಪ್ರವೇಶ ಮಾಡಿ ಮೂರು ದಶಕಗಳಾದರೂ ಎಂದೂ ಈ ಅನುಭವವಾಗಿರಲಿಲ್ಲ. ಒಬ್ಬ ಪ್ರಖ್ಯಾತ ನಟಿ ನನ್ನನ್ನು ತಂದೆಯಂತೆ ಕಂಡಿದ್ದಲ್ಲದೆ, ಭುಜ ನೋವೆಂದಾಗ ಭುಜವೊತ್ತಿದ್ದಾಳೆ. ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ. ಧನ್ಯವಾದಗಳು ರಶ್ಮಿಕಾ’ ಎಂದು ಶಂಕರ್ ಅಶ್ವಥ್ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.
ಶಂಕರ್ ಅಶ್ವಥ್ ತಮ್ಮನ್ನು ಮಗಳಂತೆ ಎಂದು ಕರೆದಿದ್ದು ನೋಡಿ ಖುಷಿಯಾಗಿರುವ ರಶ್ಮಿಕಾ ಟ್ವೀಟ್ ಮೂಲಕ ಇಂತಹಾ ಹಿರಿಯ ನಟನ ಬಾಯಲ್ಲಿ ನನ್ನ ಬಗ್ಗೆ ಇಂತಹಾ ಒಳ್ಳೆಯ ಮಾತು ಕೇಳಿ ಖುಷಿಯಾಯಿತು. ನೀವೂ ನನ್ನ ಅಪ್ಪನ ಸಮಾನ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ