ಬೆಂಗಳೂರು: ಕಿಚ್ಚ ಸುದೀಪ್ ರನ್ನು ಇತ್ತೀಚೆಗೆ ಭೇಟಿ ಮಾಡಬೇಕು, ಮಾತನಾಡಿಸಬೇಕು ಎಂದು ಅಭಿಮಾನಿಗಳು ಮಾಡುವ ಪ್ರಯತ್ನಗಳು ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತಿದೆ.
									
										
								
																	
ಇದೀಗ ಅಭಿಮಾನಿಯೊಬ್ಬ ರಕ್ತದಲ್ಲಿ ಪತ್ರ ಬರೆದು ಕಿಚ್ಚನಿಗೆ ಟ್ವೀಟ್ ಮಾಡಿ ಆ ಮೂಲಕ ತನ್ನ ಆರಾಧ್ಯ ದೈವವ ಮೆಚ್ಚಿಸಲು ಹೋಗಿ ಅವರಿಗೆ ಬೇಸರವುಂಟುಮಾಡಿದ್ದಾನೆ. ರಕ್ತದಲ್ಲಿ ಬರೆದ ಪತ್ರ ನೋಡಿ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
									
			
			 
 			
 
 			
			                     
							
							
			        							
								
																	‘ನಾನು ಇದಕ್ಕೆ ಸಂತೋಷ ಪಡಬೇಕಾ? ಒಂದು ಪತ್ರ ಬರೆಯಲು ರಕ್ತ ಚೆಲ್ಲುವುದನ್ನು ನೋಡಲು ಬೇಸರವಾಗುತ್ತದೆ. ಇದರ ಹಿಂದಿನ ನೋವು ನನಗೆ ಗೊತ್ತಿದೆ. ಖಂಡಿತಾ ನಾನು ನಿಮ್ಮನ್ನು ಒಮ್ಮೆ ಭೇಟಿಯಾಗುವೆ. ಆದರೆ ನನ್ನ ಮಾತಿನ ಮೇಲೆ ನಿಜವಾಗಿ ಗೌರವವಿದ್ದರೆ ಇನ್ನು ಮುಂದೆ ದಯವಿಟ್ಟು ಯಾರೂ ಹೀಗೆ ಮಾಡಬೇಡಿ’ ಎಂದು ಕಿಚ್ಚ ಮನವಿ ಮಾಡಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ