Publish Date: Fri, 01 Mar 2019 (10:07 IST)
Updated Date: Fri, 01 Mar 2019 (10:10 IST)
ಬೆಂಗಳೂರು: ಸುಮಾರು ಒಂದೂವರೆ ವರ್ಷಗಳ ಬಳಿಕ ಬಿಡುಗಡೆಯಾದ ಡಿ ಬಾಸ್ ದರ್ಶನ್ ಸಿನಿಮಾ ಯಜಮಾನ ನೋಡಲು ಬೆಳಗಿನಿಂದಲೇ ಜನ ಥಿಯೇಟರ್ ಮುಂದೆ ನೂಕು ನುಗ್ಗಲು ಮಾಡುತ್ತಿದ್ದಾರೆ. ಇದೀಗ ಸಿನಿಮಾ ನೋಡಿದವರ ರಿಯಾಕ್ಷನ್ ಹೇಗಿದೆ ನೋಡೋಣ.
ಫಸ್ಟ್ ಶೋ ನೋಡಲು ಹೋದ ಮಂದಿ ಶೋ ಮುಗಿಸಿದ ಬಳಿಕ ಹೇಳಿದ್ದು, ಫಸ್ಟ್ ಹಾಫ್ ಬರೀ ಬಿಲ್ಡಪ್, ಮಾಸ್ ಫೈಟ್, ಸೆಕೆಂಡ್ ಹಾಫ್ ನಲ್ಲಿ ಕತೆ ಚೆನ್ನಾಗಿದೆ ಎನ್ನುತ್ತಿದ್ದಾರೆ.
ಫಸ್ಟ್ ಹಾಫ್ ನಲ್ಲಿ ಬರೀ ದರ್ಶನ್ ಫೈಟ್, ಬಿಲ್ಡಪ್ ಗಳಲ್ಲೇ ಕಳೆದು ಹೋಗುತ್ತದೆ. ಆದರೆ ಡೈಲಾಗ್ ಗಳು ಮಾತ್ರ ಸಖತ್ತಾಗಿ ಕಿಕ್ ಕೊಡುತ್ತಿವೆ. ಸೆಂಟಿಮೆಂಟ್ ಕೂಡಾ ಇನ್ನೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಲಾಗಿದೆ.
ಮತ್ತೆ ಕೆಲವರು ಇದು ದರ್ಶನ್ ಸಿನಿಮಾಗಳಲ್ಲಿಯೇ ಬೆಸ್ಟ್ ಸಿನಿಮಾ ಎಂದಿದ್ದಾರೆ. ನಿರ್ದೇಶನ, ಸ್ಕ್ರೀನ್ ಪ್ಲೇ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಒಂದು ಸಲ ನೋಡುವುದಕ್ಕೆ ಅಡ್ಡಿಯಿಲ್ಲ ಈ ಸಿನಿಮಾ ಎಂದು ಪ್ರೇಕ್ಷಕರು ಹೊಗಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.