Select Your Language

Notifications

webdunia
webdunia
webdunia
Saturday, 12 April 2025
webdunia

ಜೀ ಕನ್ನಡ ಹೆಮ್ಮೆಯ ಕನ್ನಡಿಗದಲ್ಲಿ ಕೆಜಿಎಫ್ ಗೇ ಸಿಂಹಪಾಲು!

ಜೀ ಕನ್ನಡ
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (08:56 IST)
ಬೆಂಗಳೂರು: ಜೀ ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ನಡೆದಿದ್ದು, ಇದರಲ್ಲಿ ಕೆಜಿಎಫ್ ಸಿನಿಮಾ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.


ಉತ್ತಮ ನಟ, ಉತ್ತಮ ನಿರ್ದೇಶಕ, ಉತ್ತಮ ಖಳನಟ, ಉತ್ತಮ ಸಿನಿಮಾ, ಉತ್ತಮ ಸಂಗೀತ ನಿರ್ದೇಶಕ, ಉತ್ತಮ ಸಿನಿಮಾಟೋಗ್ರಫಿ ಪ್ರಶಸ್ತಿಗಳು ಕೆಜಿಎಫ್ ಪಾಲಾಗಿವೆ. ರಾಕಿಂಗ್ ಸ್ಟಾರ್ ಯಶ್ ‘ವರ್ಷದ ಹೆಮ್ಮೆಯ ಕನ್ನಡಿಗ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇನ್ನು ಸಾಮಾಜಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಸಮಾರಂಭದ ದೃಶ್ಯಗಳನ್ನು ಇದೇ ವಾರಂತ್ಯಕ್ಕೆ ಜೀ ಕನ್ನಡದಲ್ಲಿ ನೋಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೆ ಗರ್ಭಿಣಿ?!