ಕಲರ್ಸ್ ಕನ್ನಡದಲ್ಲಿ ಕೆಜಿಎಫ್ ಡೇಟ್ ಅನೌನ್ಸ್ ಆಯ್ತು

ಗುರುವಾರ, 14 ಮಾರ್ಚ್ 2019 (09:37 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಜಿಎಫ್ ಸಿನಿಮಾ ಸದ್ಯದಲ್ಲೇ ಪ್ರಸಾರವಾಗುತ್ತದೆ ಎಂಬ ಸುದ್ದಿ ಬಂದಿತ್ತು. ಇದೀಗ ವಾಹಿನಿ ಡೇಟ್ ಅನೌನ್ಸ್ ಮಾಡಿದೆ.


ಸ್ಯಾಂಡಲ್ ವುಡ್ ಮಾತ್ರವಲ್ಲ, ಬಾಲಿವುಡ್ ನಲ್ಲೂ ಹೊಸ ಸಂಚಲನ ಮೂಡಿಸಿದ ಸಿನಿಮಾ ಕೆಜಿಎಫ್ ಚಾಪ್ಟರ್ 1. ನಿನ್ನೆಯಷ್ಟೇ ಕೆಜಿಎಫ್ ಚಾಪ್ಟರ್ 2 ಮುಹೂರ್ತ ಸೆಟ್ಟೇರಿದೆ. ಮೊನ್ನೆಯಷ್ಟೇ ಹಿಂದಿ ಕಿರುತೆರೆಯಲ್ಲಿ ಕೆಜಿಎಫ್ ಚಾಪ್ಟರ್ 1 ಮೊದಲ ಬಾರಿಗೆ ಪ್ರಸಾರವಾಗಿದೆ.

ಇದೀಗ ಕಲರ್ಸ್ ಕನ್ನಡದಲ್ಲೂ ಪ್ರಸಾರವಾಗುತ್ತಿದ್ದು, ಮಾರ್ಚ್ 30 ಸಂಜೆ 7 ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕೆಜಿಎಫ್ ಕಿರುತೆರೆಯಲ್ಲೂ ಪ್ರಸಾರವಾಗುತ್ತಿರುವ ಸುದ್ದಿ ತಿಳಿದು ಖುಷಿ ಆಗಿರುವ ಅಭಿಮಾನಿಗಳು, ಇಲ್ಲೂ ಟಿಆರ್ ಪಿಯಲ್ಲಿ ಹೊಸ ಇತಿಹಾಸ ನಿರ್ಮಿಸಲಿ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮಿಳಿಗೆ ಹೊರಡುವ ಮುನ್ನ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ರಿಕ್ವೆಸ್ಟ್!