ತಮಿಳಿಗೆ ಹೊರಡುವ ಮುನ್ನ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ರಿಕ್ವೆಸ್ಟ್!

ಗುರುವಾರ, 14 ಮಾರ್ಚ್ 2019 (09:35 IST)
ಬೆಂಗಳೂರು: ಸ್ಯಾಂಡಲ್ ವುಡ್ ಬಳಿಕ, ತೆಲುಗಿನಲ್ಲೂ ಮೋಡಿ ಮಾಡಿದ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಈಗ ತಮಿಳಿನತ್ತ ಮುಖ ಮಾಡಿದ್ದಾರೆ.


ತಮಿಳು ಸ್ಟಾರ್ ಕಾರ್ತಿ ಜತೆ ರಶ್ಮಿಕಾ ಸಿನಿಮಾ ಮಾಡಲಿರುವ ಬಗ್ಗೆ ಈಗಾಗಲೇ ಓದಿರುತ್ತೀರಿ. ಇದೀಗ ಆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.

‘ಇದುವರೆಗೆ ನನಗೆ ಕನ್ನಡ ಮತ್ತು ತೆಲುಗು ಜನತೆ ಪ್ರೋತ್ಸಾಹ ನೀಡಿದ್ದೀರಿ. ಎಲ್ಲರೂ ನನಗೆ ಆಗಾಗ ತಮಿಳಿಗೆ ಯಾವಾಗ ಬರ್ತೀರಿ? 2019 ರಲ್ಲಿ ಬರ್ತೀರಾ ಎಂದು ಕೆಲಸ ಕೇಳುತ್ತಲೇ ಇದ್ದಿರಿ.. ಕೊನೆಗೂ ನಾನು ಬಂದೆ..! ಈ ತಂಡದೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರೀತಿಯಿರಲಿ’ ಎಂದು ರಶ್ಮಿಕಾ ಅಭಿಮಾನಿಗಳಿಗೆ ಸಂದೇಶ ಬರೆದಿದ್ದಾರೆ. ತಮಿಳಿನಲ್ಲೂ ರಶ್ಮಿಕಾ ಸಿನಿಮಾ ಸೂಪರ್  ಹಿಟ್ ಆಗುತ್ತಾ? ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದುಬಾರಿ ಕಾರು ಗಿಫ್ಟ್ ಕೊಟ್ಟಿದ್ದಕ್ಕೆ ಗಂಡನಿಗೆ ಪಬ್ಲಿಕ್ ಆಗಿ ಹೀಗೆ ಹೇಳಿದ್ರು ಪ್ರಿಯಾಂಕಾ ಚೋಪ್ರಾ