Publish Date: Mon, 25 Mar 2019 (08:52 IST)
Updated Date: Mon, 25 Mar 2019 (08:54 IST)
ಮುಂಬೈ: ಬಾಲಿವುಡ್ ಬಿಗ್ ಬಿ ಸೊಸೆ, ಅಭಿಷೇಕ್ ಬಚ್ಚನ್ ಮುದ್ದಿನ ಪತ್ನಿ, ನಟಿ ಐಶ್ವರ್ಯಾ ರೈ ಮತ್ತೆ ಗರ್ಭಣಿಯೇ? ಎರಡನೇ ಮಗುವಿಗೆ ತಾಯಾಗುತ್ತಿದ್ದಾರೆಯೇ?
ಇಂತಹದ್ದೊಂದು ಊಹಾಪೋಹಗಳು ಇದೀಗ ಗರಿಗೆದರಿವೆ. ಐಶ್ವರ್ಯಾ ಮತ್ತು ಅಭಿಷೇಕ್ ಇತ್ತೀಚೆಗೆ ಗೋವಾಗೆ ಪ್ರವಾಸ ತೆರಳಿದ್ದು, ಈ ಸಂದರ್ಭದಲ್ಲಿ ಇಬ್ಬರೂ ಕೈ ಕೈ ಹಿಡಿದುಕೊಂಡು ಗೋವಾ ಬೀಚ್ ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡಿತ್ತು.
ಆದರೆ ಈ ಫೋಟೋದಲ್ಲಿ ಲೂಸ್ ಡ್ರೆಸ್ ಹಾಕಿಕೊಂಡಿರುವ ಐಶ್ವರ್ಯಾ ಹೊಟ್ಟೆ ಉಬ್ಬಿಕೊಂಡಂತೆ ಕಾಣಿಸುತ್ತಿದೆ. ಇದನ್ನು ನೋಡಿ ನೆಟ್ಟಿಗರು ಐಶ್ವರ್ಯಾ ಮತ್ತೆ ಗರ್ಭಿಣಿಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ದಂಪತಿಗೆ ಈಗಾಗಲೇ ಆರಾಧ‍್ಯ ಎಂಬ ಎಂಟು ವರ್ಷದ ಪುತ್ರಿಯಿದ್ದಾಳೆ. ಕೊನೆಯ ಬಾರಿ ಐಶ್ವರ್ಯಾ ಕಾಣಿಸಿಕೊಂಡಿದ್ದು ‘ಫನ್ನೇಖಾನ್’ ಸಿನಿಮಾದಲ್ಲಿ. ಇಷ್ಟೊಂದು ಸಮಯ ಬ್ರೇಕ್ ಪಡೆದುಕೊಂಡಿರುವುದೂ ಅಭಿಮಾನಿಗಳ ಅನುಮಾನ ಹೆಚ್ಚಲು ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ