Publish Date: Sun, 07 Apr 2019 (05:32 IST)
Updated Date: Sun, 07 Apr 2019 (05:33 IST)
ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಜೀ ಕನ್ನಡ ತನ್ನ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳು ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಕೆಲಸ ಇದೀಗ ವೀಕ್ಷಕರಿಗೇ ಬಿಟ್ಟುಬಿಡಲಾಗಿದೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭವಾಗುತ್ತದೆ ಎಂದಾಗಲೇ ಸಾಮಾಜಿಕ ಜಾಲತಾಣದ ಮೂಲಕ ವೀಕ್ಷಕರು ತಮ್ಮ ಇಷ್ಟದ ಯಾವೆಲ್ಲಾ ಸಾಧಕರು ಈ ಬಾರಿ ಸಾಧಕರ ಸೀಟ್ ನಲ್ಲಿ ಕೂರಬೇಕು ಎಂದು ತಮ್ಮ ಅಭಿಪ್ರಾಯ ಬರೆದುಕೊಂಡಿದ್ದರು.
ಇದೀಗ ಸ್ವತಃ ಜೀ ಕನ್ನಡ ಅಭಿಮಾನಿಗಳಿಗೆ ಇಂತಹದ್ದೊಂದು ಆಹ್ವಾನ ನೀಡಿದೆ. ಮೂರು ಸೀಸನ್ ಗಳಲ್ಲಿ ಭಾಗವಹಿಸಿದ ಅತಿಥಿಗಳ ಲಿಸ್ಟ್ ನೀಡಿದ್ದು, ಇವರ ಹೊರತಾಗಿ ಯಾರೆಲ್ಲಾ ಈ ಬಾರಿ ಕಾರ್ಯಕ್ರಮದಲ್ಲಿ ಬರಬೇಕೆಂದು ನೀವು ಬಯಸುತ್ತೀರಿ ಎಂದು ಕಾಮೆಂಟ್ ಮಾಡಿ ಎಂದು ಆಹ್ವಾನವಿತ್ತಿದೆ. ಇದೀಗ ವೀಕ್ಷಕರು ತಮಗೆ ತೋಚಿದ ಹಲವು ಸಾಧಕರ ಹೆಸರು ಹೇಳುತ್ತಿದ್ದಾರೆ. ಮೂಲಗಳ ಪ್ರಕಾರ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬರುವುದು ಪಕ್ಕಾ ಆಗಿದೆ. ಅವರ ಹೊರತಾಗಿ ಯಾರೆಲ್ಲಾ ಬರಬೇಕು ನೀವೇ ಹೇಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ