Publish Date: Thu, 04 Apr 2019 (10:32 IST)
Updated Date: Thu, 04 Apr 2019 (10:35 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಧಾರವಾಹಿಗಳ ಮೂಲಕ ಮನೆ ಮಾತಾಗಿರುವ ನಟ ಅನಿಲ್ ಕುಮಾರ್ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಅವರಿಗೆ 50 ವರ್ಷ ವಯಸ್ಸಾಗಿತ್ತು. ನೀನಾಸಂ ಪದವೀಧರರಾಗಿದ್ದ ಅನಿಲ್ ಕುಮಾರ್ ಶ್ರುತಿ ನಾಯ್ಡು ನಿರ್ಮಾಣದ ಧಾರವಾಹಿಗಳಲ್ಲಿ ಖಾಯಂ ನಟರಾಗಿದ್ದರು. ‘ಮೂಡಲ ಮನೆ’ ಧಾರವಾಹಿ ಮೂಲಕ ಪರಿಚಿತರಾದ ಅನಿಲ್ ‘ಚಿ. ಸೌ. ಸಾವಿತ್ರಿ’, ‘ಮದರಂಗಿ’, ‘ಜನುಮದ ಜೋಡಿ’, ‘ಶ್ರೀರಸ್ತು ಶುಭಮಸ್ತು’ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ‘ಬ್ರಹ್ಮಗಂಟು’ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದರು.
ಅನಿಲ್ ಗೆ ಪತ್ನಿ ಮತ್ತು ಓರ್ವ ಪುತ್ರನಿದ್ದಾನೆ. ಅನಿಲ್ ನಿಧನಕ್ಕೆ ಕಿರುತೆರೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ತಿಪಟೂರಿನಲ್ಲಿ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ