ಮತ್ತೆ ಕನ್ನಡದ ಕೋಟ್ಯಾಧಿಪತಿಗೆ ಪುನೀತ್ ರಾಜ್ ಕುಮಾರ್! ಆದರೆ ಈ ಬಾರಿ ಚಾನೆಲ್ ಚೇಂಜ್

ಶನಿವಾರ, 30 ಮಾರ್ಚ್ 2019 (08:35 IST)
ಬೆಂಗಳೂರು: ಕನ್ನಡ ಕೋಟ್ಯಾಧಿಪತಿ ಶೋ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಆ ಜನಪ್ರಿಯ ಕಾರ್ಯಕ್ರಮಕ್ಕೆ ಕಳೆದ ಬಾರಿ ರಮೇಶ್ ಅರವಿಂದ್ ನಿರೂಪಕರಾಗಿದ್ದರು.


ಮೊದಲ ಎರಡು ಸೀರೀಸ್ ಗಳಲ್ಲಿ ಕನ್ನಡದ ಕೋಟ್ಯಾಧಿಪತಿ ನಿರೂಪಿಸಿದ್ದು ಪುನೀತ್ ರಾಜ್ ಕುಮಾರ್. ಆಗ ಆ ಕಾರ್ಯಕ್ರಮ ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೆ ಕನ್ನಡದ ಕೋಟ್ಯಾದಿಪತಿ ಬರಲಿದೆ. ಮತ್ತೆ ಪುನೀತ್ ರಾಜ್ ಕುಮಾರ್ ಈ ಶೋ ನಿರೂಪಣೆ ಮಾಡಲಿದ್ದಾರೆ ಎನ್ನುವುದು ವೀಕ್ಷಕರಿಗೆ ಸಂತಸದ ವಿಚಾರ.

ಆದರೆ ಈ ಬಾರಿ ಕನ್ನಡದ ಕೋಟ್ಯಾಧಿಪತಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿಲ್ಲ. ಬದಲಾಗಿ ಕಲರ್ಸ್ ಕನ್ನಡಕ್ಕೆ ಶಿಫ್ಟ್ ಆಗಿದೆ. ಈಗಾಗಲೇ ಪ್ರೋಮೋ ಸದ್ದು ಮಾಡುತ್ತಿದೆ. ವೀಕ್ಷಕರೂ ಕೋಟಿ ಗೆಲ್ಲುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಹಕರಾಗಿದ್ದಾರೆ. ಯಾವಾಗಿನಿಂದ ಆರಂಭ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತಿ ರಣವೀರ್ ಸಿಂಗ್ ರನ್ನು ಹಾದಿಗೆ ತರಲು ಟ್ರೈನಿಂಗ್ ಕೊಡುತ್ತಿದ್ದಾರಂತೆ ದೀಪಿಕಾ ಪಡುಕೋಣೆ