Select Your Language

Notifications

webdunia
webdunia
webdunia
Friday, 11 April 2025
webdunia

ತಂಬಾಕು ಜಾಹೀರಾತಿನಲ್ಲಿ ನಟಿಸಬೇಡಿ ಎಂದು ಅಜಯ್ ದೇವಗನ್ ಗೆ ಮನವಿ ಮಾಡಿದ ಕ್ಯಾನ್ಸರ್ ಪೀಡಿತ ಅಭಿಮಾನಿ

ಅಜಯ್ ದೇವಗನ್
ಮುಂಬೈ , ಮಂಗಳವಾರ, 7 ಮೇ 2019 (07:44 IST)
ಮುಂಬೈ: ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ತಂಬಾಕು ಉತ್ಪನ್ನದ ಜಾಹೀರಾತೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ.  ಆದರೆ ಈ ಜಾಹೀರಾತಿನಲ್ಲಿ ನಟಿಸಬೇಡಿ ಎಂದು ಅವರಿಗೆ ಈಗ ಅಭಿಮಾನಿಯೊಬ್ಬರು ಮನವಿ ಮಾಡಿದ್ದಾರೆ.


ಅಜಯ್ ಜಾಹೀರಾತು ನೋಡಿ ನಾನಕ್ರಮ್ ಮೀನಾ ಎಂಬ 40 ವರ್ಷದ ವ್ಯಕ್ತಿ ನಿರಂತರವಾಗಿ ತಂಬಾಕು ಸೇವಿಸುತ್ತಿದ್ದರು. ಈಗ ಈ ಅಭಿಮಾನಿಗೆ ಕ್ಯಾನ್ಸರ್ ರೋಗ ಬಂದಿದೆ. ಹೀಗಾಗಿ ಈ ತಂಬಾಕು ಸೇವನೆ ಎಷ್ಟು ಅಪಾಯಕಾರಿ ಎನ್ನುವುದು ಅವರಿಗೆ ಅನುಭವವಾಗಿದೆ.

ಈ ಹಿನ್ನಲೆಯಲ್ಲಿ ಅಜಯ್ ದೇವಗನ್ ಗೆ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇತರ ಬಾಲಿವುಡ್ ಸ್ಟಾರ್ ಗಳಿಗೂ ಮದ್ಯ, ಮಾದಕ ವಸ್ತುಗಳನ್ನು ಪ್ರಚುಪಡಿಸುವ ಉತ್ಪನ್ನಗಳ ರಾಯಭಾರಿ ಆಗಬೇಡಿ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು