Publish Date: Mon, 06 May 2019 (07:57 IST)
Updated Date: Mon, 06 May 2019 (07:58 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅನಾರೋಗ್ಯದಿಂದ ಬಳಲುತ್ತಿದ್ದು ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.
ಮೈ ಕೈ ನೋವು, ಸುಸ್ತಿನಿಂದ ಬಳಲುತ್ತಿದ್ದ ಅಮಿತಾಭ್ ಬಚ್ಚನ್ ತಮ್ಮ ಜಲ್ಸಾ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ನಿನ್ನೆ ದಿನ ತಮ್ಮನ್ನು ಭೇಟಿಯಾಗಲು ಬರುವ ಅಭಿಮಾನಿಗಳನ್ನು ಭೇಟಿಯಾಗಲಿಲ್ಲ.
ಕಳೆದ 36 ವರ್ಷಗಳಿಂದಲೂ ಅಮಿತಾಭ್ ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರಗಳಂದು ತಪ್ಪದೇ ದರ್ಶನ ನೀಡುತ್ತಾರೆ. ಆದರೆ ನಿನ್ನೆ ದಿನ ಇದು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಬರೆದುಕೊಂಡಿದ್ದಾರೆ. ಆದರೆ ತನ್ನ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಗೊಳ್ಳಬೇಕಿಲ್ಲ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ