Select Your Language

Notifications

webdunia
webdunia
webdunia
webdunia

ವೈವಾಹಿಕ ಜೀವನದ ಬಗ್ಗೆ ತುಟಿ ಪಿಟಕ್ ಎನ್ನದ ಪ್ರೇಮಾ

ವೈವಾಹಿಕ ಜೀವನದ ಬಗ್ಗೆ ತುಟಿ ಪಿಟಕ್ ಎನ್ನದ ಪ್ರೇಮಾ
ಬೆಂಗಳೂರು , ಸೋಮವಾರ, 6 ಮೇ 2019 (07:52 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ನಲ್ಲಿ ಕುಳಿತ ನಟಿ ಪ್ರೇಮಾ ತಮ್ಮ ಮುರಿದು ಬಿದ್ದ ವೈವಾಹಿಕ ಜೀವನದ ಬಗ್ಗೆ ಬಾಯಿಬಿಡಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದು ಸುಳ್ಳಾಗಿದೆ.


ರಮೇಶ್ ನಟಿ ಪ್ರೇಮಾರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ ಚಿತ್ರರಂಗದಿಂದ 2006 ರಲ್ಲಿ ಬ್ರೇಕ್ ತೆಗೆದುಕೊಂಡಿದ್ದರ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಪ್ರೇಮಾ ಮದುವೆಗಾಗಿ ಬ್ರೇಕ್ ತೆಗೆದುಕೊಂಡ ವಿಚಾರ ಹೊರ ಹಾಕಿದರು.

ಈ ವೇಳೆ ರಮೇಶ್ ಅರವಿಂದ್ ನಿಮ್ಮ ವೈವಾಹಿಕ ಜೀವನದಲ್ಲಿ ನಿಜಕ್ಕೂ ಏನಾಯಿತು? ನಿಮಗೆ ಇಷ್ಟವಿಲ್ಲದಿದ್ದರೆ ಇಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದರು. ಆದರೆ ಪ್ರೇಮಾ ಕೆಲ ಹೊತ್ತು ಮೌನವಾಗಿ ನಂತರ ನಗುತ್ತಲೇ ‘ನೋ ಕಾಮೆಂಟ್ಸ್’ ಎಂದರು. ಹೀಗಾಗಿ ಪ್ರೇಮಾ ವೈವಾಹಿಕ ಬದುಕು ಬಹಿರಂಗವಾಗಲೇ ಇಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಧಿಕಾ ಪಂಡಿತ್-ಯಶ್ ಮಗಳ ಮುಖ ಕೊನೆಗೂ ಬಹಿರಂಗ!