ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರದ ಅತಿಥಿ ನಾಯಕಿ ನಟಿ ಪ್ರೇಮಾ. ಒಂದು ಕಾಲದಲ್ಲಿ ನಂ.1 ನಟಿಯಾಗಿ ಮೆರೆದ ಪ್ರೇಮಾ ಬದುಕಿನ ಪುಟಗಳು ಈ ಕಾರ್ಯಕ್ರಮದಲ್ಲಿ ತೆರೆದುಕೊಳ್ಳಲಿವೆ.
ಪ್ರೇಮಾರನ್ನು ನಾಯಕಿಯಾಗಿ ತೆರೆ ಮೇಲೆ ನೋಡಿದ್ದವರಿಗೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅವರ ವೈವಾಹಿಕ ಜೀವನದ ಬಗ್ಗೆ, ವಿಚ್ಛೇದನದ ಬಗ್ಗೆ ಹಲವು ರೂಮರ್ ಗಳು ಹಬ್ಬಿತ್ತು. ಜತೆಗೆ ಅವರಿಗೆ ಅನಾರೋಗ್ಯದ ಬಗ್ಗೆಯೂ ಊಹಾಪೋಹಗಳು ಎದ್ದಿದ್ದವು.
ಇದೀಗ ಆ ಎಲ್ಲಾ ರೂಮರ್ ಗಳಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ. ತಮ್ಮ ವೈಯಕ್ತಿಕ ಬದುಕಿನ ಎಲ್ಲಾ ಅನುಮಾನಗಳಿಗೂ ಪ್ರೇಮಾ ಕಾರ್ಯಕ್ರಮದಲ್ಲಿ ಸರಿಯಾದ ಸ್ಪಷ್ಟನೆ ನೀಡಲಿದ್ದಾರೆ. ಹೀಗಾಗಿ ಪ್ರೇಮಾ ಎಪಿಸೋಡ್ ಬಗ್ಗೆ ವೀಕ್ಷಕರು ಭಾರೀ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ