Publish Date: Sat, 04 May 2019 (07:59 IST)
Updated Date: Sat, 04 May 2019 (08:01 IST)
ಮುಂಬೈ: ಎಲ್ಲಾ ಸರಿ ಹೋಗಿದ್ದರೆ ಇಷ್ಟೊತ್ತಿಗಾಗಲೇ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ಚೋಪ್ರಾ ವಿವಾಹವಾಗಬೇಕಿತ್ತು. ಆದರೆ ಅದ ಮುರಿದು ಬಿದ್ದಿದೆ.
ಮದುವೆಗೆಂದು ಬಂದಿದ್ದ ಪ್ರಿಯಾಂಕಾ ಮರಳಿ ಮನೆಗೆ ತೆರಳಿದ್ದಾರೆ. ಸಿದ್ಧಾರ್ಥ್ ವಿವಾಹವಾಗಬೇಕಿದ್ದ ವಧು ಇಶಿತಾಗೆ ಅರ್ಜೆಂಟಾಗಿ ಶಸ್ತ್ರಚಿಕಿತ್ಸೆಯಾಗಬೇಕಿರುವುದರಿಂದ ಮದುವೆ ಮುಂದೂಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು.
ಆದರೆ ನಿಜ ಕಾರಣ ಇಶಿತಾ ಆಪರೇಷನ್ ಅಲ್ಲ ಎಂದು ಇದೀಗ ಗೊತ್ತಾಗಿದೆ. ಇಶಿತಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಿದ್ಧಾರ್ಥ್ ಜತೆಗಿದ್ದ ಅನೇಕ ಫೋಟೋಗಳನ್ನು ಡಿಲೀಟ್ ಮಾಡಿರುವುದಲ್ಲದೆ, ಹೊಸ ಬದುಕಿನ ಆರಂಭ ಎಂದು ಸ್ನೇಹಿತರ ಜತಗೆ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡುತ್ತಿರುವು ಫೋಟೋ ಪ್ರಕಟಿಸಿದ್ದು ಕಂಡುಬಂದಿದೆ. ಹೀಗಾಗಿ ಅನಾರೋಗ್ಯ ನೆಪವಾಗಿತ್ತಷ್ಟೇ. ನಿಜವಾಗಿ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದ್ದೇ ಮದುವೆ ಮುರಿದುಬೀಳಲು ಕಾರಣ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ