Select Your Language

Notifications

webdunia
webdunia
webdunia
webdunia

ಸ್ಪೆಷಲ್ ಆಗಿ ಬರ್ತ್ ಡೇ ಆಚರಿಸಿಕೊಂಡ ನಟಿ ಹರ್ಷಿಕಾ ಪೂಣಚ್ಚ

ಸ್ಪೆಷಲ್ ಆಗಿ ಬರ್ತ್ ಡೇ ಆಚರಿಸಿಕೊಂಡ ನಟಿ ಹರ್ಷಿಕಾ ಪೂಣಚ್ಚ
ಬೆಂಗಳೂರು , ಶುಕ್ರವಾರ, 3 ಮೇ 2019 (06:24 IST)
ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಆಗಾಗ ಸಾಮಾಜಿಕ ಕೆಲಸಗಳ ಮೂಲಕವೂ ಸುದ್ದಿಯಾಗುತ್ತಾರೆ. ಇದೀಗ ಕೊಡಗಿನ ಬೆಡಗಿಯ ಮತ್ತೊಂದು ಸುಂದರ ಮುಖ ಅನಾವರಣಗೊಂಡಿದೆ.


ಕೊಡಗಿನಲ್ಲಿ ಪ್ರವಾಹ ಬಂದಿದ್ದಾಗ, ಇತ್ತೀಚೆಗೆ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಮನೆಗೆ ಭೇಟಿ ನೀಡಿ ಹರ್ಷಿಕಾ ತಾವು ಎಷ್ಟು ಸಾಮಾಜಿಕ ಕಳಕಳಿಯ ವ್ಯಕ್ತಿ ಎಂದು ತೋರಿಸಿಕೊಟ್ಟಿದ್ದರು.

ಇದೀಗ ತಮ್ಮ ಬರ್ತ್‍ ಡೇಯನ್ನು ಅನಾಥ ಮಕ್ಕಳೊಂದಿಗೆ ಆಚರಿಸುವ ಮೂಲಕ ತಾವೆಷ್ಟು ಸ್ಪೆಷಲ್ ಎಂದು ತೋರಿಸಿಕೊಂಡಿದ್ದಾರೆ. ಅನಾಥ ಮಕ್ಕಳೊಂದಿಗೆ ಬೆರೆತು, ಎಲ್ಲರೊಂದಿಗೆ ಕೇಕ್ ಕಟ್ ಮಾಡಿ, ಎಲ್ಲರ ಜತೆ ಸೆಲ್ಫೀಗೆ ಪೋಸ್ ಕೊಟ್ಟು ಅವರ ಜತೆ ಕೆಲವು ಕಾಲ ಬೆರೆತು ಹರ್ಷಿಕಾ ತಮ್ಮ ಜನ್ಮ ದಿನ ಆಚರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳದಲ್ಲಿ ಡಾ. ರಾಜ್ ಗೆ ಹೀಗೊಂದು ಆಸೆಯಿತ್ತಂತೆ!