ಮುಂಬೈ: ಹಾಟ್ ನಟಿ ರಾಖಿ ಸಾವಂತ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಪಾಕ್ ಧ್ವಜವನ್ನು ಮೈಗೆ ಹೊದ್ದುಕೊಂಡ ಫೋಟೋ ಪ್ರಕಟಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಲಪಾತದ ಹಿನ್ನಲೆಯಲ್ಲಿ ರಾಖಿ ಪಾಕ್ ಧ‍್ವಜವನ್ನು ಎದೆಗಾನಿಸಿಕೊಂಡ ರೀತಿಯಲ್ಲಿ ಪೋಸ್ ಕೊಟ್ಟಿದ್ದು, ಈ ಫೋಟೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ.
ಈ ಫೋಟೋ ನೋಡಿ ಭಾರತೀಯರು ರಾಖಿಗೆ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಈ ಹಿನ್ನಲೆಯಲ್ಲಿ ಸ್ಪಷ್ಟನೆ ಕೊಟ್ಟ ರಾಖಿ ನಾನು ಭಾರತವನ್ನು ಪ್ರೀತಿಸುತ್ತೇನೆ ಆದರೆ ಇದು ನನ್ನ ಸಿನಿಮಾ ಕ್ಯಾರೆಕ್ಟರ್ ಗಾಗಿ ಈ ರೀತಿ ಪೋಸ್ ಕೊಟ್ಟಿದ್ದೇನೆ ಎಂದು ಸ್ಪಷ್ಟನೆ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ