ಹಲವು ಬಾರಿ ನನ್ನ ಬಳಿ ‘ಅದಕ್ಕಾಗಿ’ ಬೇಡಿಕೆಯಿಟ್ಟಿದ್ದರು! ನಟಿ ಸಮೀರಾ ರೆಡ್ಡಿ ಬಾಂಬ್

ಬುಧವಾರ, 8 ಮೇ 2019 (07:46 IST)
ಮುಂಬೈ: ಹಾಟ್ ಬೆಡಗಿ ಸಮೀರಾ ರೆಡ್ಡಿ ಸಂದರ್ಶನವೊಂದರಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಿಚ್ಚಿಟ್ಟಿದ್ದಾರೆ.


ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಹಲವು ಬಾರಿ ಹಲವರು ಅವಕಾಶಕ್ಕಾಗಿ ಲೈಂಗಿಕವಾಗಿ ಬಳಸಿಕೊಳ್ಳಲು ಬೇಡಿಯಿಟ್ಟಿದ್ದರು ಎಂದು ಸಮೀರಾ ಹೇಳಿಕೊಂಡಿದ್ದಾರೆ. ಇದೀಗ ಮದುವೆಯಾಗಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಮೀರಾ ನಟಿಯರ ವೃತ್ತಿ ಬದುಕಿನ ಕರಾಳ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಸಿನಿಮಾ ರಂಗದಲ್ಲಿ ಏನನ್ನು ಬದಲಾಯಿಸಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಸಮೀರಾ ‘ಇಂಡಸ್ಟ್ರಿಯಲ್ಲಿ ಮಹಿಳೆಯನ್ನು ಆ ದೃಷ್ಟಿಯಿಂದ ನೋಡುವುದನ್ನು ಬದಲಾಯಿಸಲು ಬಯಸುತ್ತೇನೆ. ನಾನೂ ಹಲವು ಬಾರಿ ಇಂತಹ ಪ್ರಸಂಗ ಎದುರಿಸಿದ್ದೇನೆ’ ಎಂದು ಸಮೀರಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲಂಡನ್ ನಲ್ಲಿ ಬಿಡುಗಡೆಯಾಗದ ಪ್ರೀಮಿಯರ್ ಪದ್ಮಿನಿ ಜಗ್ಗೇಶ್ ಆಕ್ರೋಶ