Publish Date: Wed, 08 May 2019 (07:12 IST)
Updated Date: Wed, 08 May 2019 (07:14 IST)
ಬೆಂಗಳೂರು:ನವರಸನಾಯಕ ಜಗ್ಗೇಶ್ ಅಭಿನಯಿಸಿರುವ ಪ್ರೀಮಿಯರ್ ಪದ್ಮಿನಿ ಸಿನಿಮಾಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಇದು ವಿದೇಶದಲ್ಲಿ ಬಿಡುಗಡೆಯಾಗಿಲ್ಲ.
ಈ ಬಗ್ಗೆ ಅಭಿಮಾನಿಯೊಬ್ಬರು ಲಂಡನ್ ನಿಂದ ಜಗ್ಗೇಶ್ ಗೆ ಟ್ವೀಟ್ ಮಾಡಿದ್ದು, ನಿಮ್ಮ ಅಭಿಮಾನಿಗಳು ಇಲ್ಲೂ ಇದ್ದೀವಿ. ಇಲ್ಲಿ ಸಿನಿಮಾ ಬಿಡುಗಡೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ಆದರೆ ವಿತರಕರ ರಾಜಕೀಯದಿಂದಾಗಿ ವಿದೇಶದಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನಗೆ ಪ್ರೀತಿ ಪಾತ್ರರ ಅರಿವಿದೆ. ಆದರೆ ಇದು ನಾಟಕೀಯ ಜಗತ್ತು. ಇಲ್ಲಿ ಬಿಲ್ಡಪ್ ಗಳಿಗೆ ದುನಿಯ ಫಿಕ್ಸ್ ಆಗಿದೆ. ಚಿತ್ರ ವಿತರಕರ ನಡುವೆ ನನ್ನದು ಅಮಾಯಕ ಹೋರಾಟ. ನೀವು ಕೈ ಚಾಚಿದರೆ ನಾನು ಸಿಗುವೆ’ ಎಂದು ಜಗ್ಗೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ