Publish Date: Wed, 08 May 2019 (08:12 IST)
Updated Date: Wed, 08 May 2019 (08:14 IST)
ಮುಂಬೈ: ಅತಿಯಾಗಿ ಸ್ಟೈಲ್ ಮಾಡಲು ಹೋಗಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗೇಲಿಗೊಳಗಾಗಿದ್ದಾರೆ.
ಅಮೆರಿಕಾದ ಖ್ಯಾತ ಫ್ಯಾಷನ್ ಗಾಲಾ 2019 ರಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊನಾಸ್ ರೊಂದಿಗೆ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾರ ವಿಚಿತ್ರ ಹೇರ್ ಸ್ಟೈಲ್ ನೋಡಿ ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ.
ಗುಂಗುರು ಕೂದಲು ಮಾಡಿಕೊಂಡು ಕೆದರಿಕೊಂಡಂತೆ ಕೂದಲು ವಿನ್ಯಾಸಗೊಳಿಸಿರುವ ಪ್ರಿಯಾಂಕಾರನ್ನು ನೋಡಿ ನೆಟ್ಟಿಗರು ಕಾಡುಗಳ್ಳ ವೀರಪ್ಪನ್ ಹೇರ್ ಸ್ಟೈಲ್ ಗೆ ಹೋಲಿಸಿ ಗೇಲಿ ಮಾಡಿದ್ದಾರೆ. ಇನ್ನು ಕೆಲವರು ಪ್ರಿಯಾಂಕಾರ ಈ ಪ್ರಯೋಗಾತ್ಮಕ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದವರೂ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ