ರಾಫೆಲ್ ನಡಾಲ್ ಎಡಗೈ ಮಣಿಕಟ್ಟು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆಡುವುದಕ್ಕೆ ತಾವು ಬದ್ಧರಾಗಿರುವುದಾಗಿ ಹೇಳಿದ್ದಾರೆ. ತಂಡದ ಜತೆ ಚರ್ಚಿಸಿದ ಬಳಿಕ ನನಗೆ ಸಾಧ್ಯವಾದ ಎಲ್ಲಾ ವಿಭಾಗಗಳಲ್ಲೂ ಆಡಲು ನಿರ್ಧರಿಸಿದೆ ಎಂದು 30ವರ್ಷದ ಸ್ಪೇನ್ ಆಟಗಾರ ಜತೆಗಾರ ಡೇವಿಡ್ ಫೆರರ್ ಜತೆ 90 ನಿಮಿಷಗಳ ತರಬೇತಿ ಸೆಷನ್ ಬಳಿಕ ತಿಳಿಸಿದರು.
ವಿಶ್ವ ನಂಬರ್ 5 ನಡಾಲ್ ತಮ್ಮ ಅಭ್ಯಾಸದ ಬಳಿಕ ಸೆಂಟರ್ ಕೋರ್ಟ್‌ನಲ್ಲಿ ಸುದೀರ್ಘ ಅವಧಿಯನ್ನು ಕಳೆದು ಟೀಂ ವೈದ್ಯರು ಮತ್ತು ಟೀಂ ನಾಯಕ ಮಾರ್ಟಿನೆಜ್ ಜತೆಗೆ ತಮ್ಮ ಯೋಜನೆಯನ್ನು ಕುರಿತು ಚರ್ಚಿಸಿದರು.
ನಡಾಲ್ ಎಡಮಣಿಕಟ್ಟಿನಲ್ಲಿ ಸ್ನಾಯುರಜ್ಜು ಹಾನಿಯಿಂದ ಮೂರನೇ ಸುತ್ತು ಆರಂಭಕ್ಕೆ ಮುಂಚಿತವಾಗಿಯೇ ಫ್ರೆಂಚ್ ಓಪನ್ ತ್ಯಜಿಸಿದ್ದರು. ಗಾಯದ ಕಾರಣದಿಂದಾಗಿ ವಿಂಬಲ್ಡನ್ ಕೂಡ ಮಿಸ್ ಮಾಡಿಕೊಂಡಿದ್ದರು. ತಮ್ಮ ಮಣಿಕಟ್ಟಿನಲ್ಲಿ ನಡಾಲ್ ಧರಿಸಿದ್ದ ರಕ್ಷಣಾತ್ಮಕ ಪಟ್ಟಿ ಮಂಗಳವಾರ ಕಂಡುಬಂದಿಲ್ಲ.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಡಾಲ್ ಚಿನ್ನದ ಪದಕ ವಿಜೇತರಾಗಿದ್ದರು. ಆದರೆ ಮಂಡಿ ಗಾಯದಿಂದಾಗಿ 2012ರ ಲಂಡನ್ ಒಲಿಂಪಿಕ್ಸ್ ಮಿಸ್ ಮಾಡಿಕೊಂಡಿದ್ದರು. ಶುಕ್ರವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅವರು ದೇಶದ ಧ್ವಜವನ್ನು ಒಯ್ಯಲಿದ್ದಾರೆ. ಡಬಲ್ಸ್‌ನಲ್ಲಿ ತಮ್ಮ ಪದಕದ ಅವಕಾಶ ಹೆಚ್ಚಾಗಿದೆ ಎಂದೂ ಈ ಸಂದರ್ಭದಲ್ಲಿ ನಡಾಲ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ