ಅಲಸ್ಟೈರ್ ಕುಕ್ ಮತ್ತು ಜೋಯ್ ರೂಟ್ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಜತೆಯಾಟದಿಂದ ಪಾಕಿಸ್ತಾನಕ್ಕೆ ಸೋಲುಣಿಸಿ ಸರಣಿಯನ್ನು ಸಮಮಾಡಿಕೊಂಡಿದ್ದರು.ಆದ್ದರಿಂದ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್‌ನ ಇವೆರಡು ಆಧಾರಸ್ತಂಭಗಳನ್ನು ಶೀಘ್ರದಲ್ಲೇ ಉರುಳಿಸಿದರೆ ಎಡ್ಗ್‌ಬಾಸ್ಟನ್‌ನಲ್ಲಿ ಅದರ ಅವಕಾಶಗಳಿಗೆ ಚೇತರಿಕೆ ನೀಡುತ್ತದೆ ಎಂದು ಮಿಸ್ಬಾ ಉಲ್ ಹಕ್ ಭಾವಿಸಿದ್ದಾರೆ.
ಹಿಂದಿನ ಟೆಸ್ಟ್ ಪಂದ್ಯದಲ್ಲಿ ಕುಕ್ ಮತ್ತು ರೂಟ್ ಇಬ್ಬರೂ ಸೇರಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 506 ರನ್ ಸ್ಕೋರ್ ಮಾಡುವ ಮೂಲಕ ನೈತಿಕ ಸ್ಥೈರ್ಯದ ಜಯ ತಂದಿತ್ತಿದ್ದರು. ಕುಕ್ ಮತ್ತು ರೂಟ್ ಬೆದರಿಕೆಯನ್ನು ಆರಂಭದಲ್ಲೇ ಚಿವುಟುವ ಮೂಲಕ ಮಾನಸಿಕ ಅನುಕೂಲ ಪಡೆಯಲು ಮಿಸ್ಬಾ ಆಶಿಸಿದ್ದಾರೆ. ಪ್ರತಿಯೊಂದು ತಂಡದಲ್ಲಿ ಮುಖ್ಯ ಆಟಗಾರರಿದ್ದು, ಈ ಕ್ಷಣದಲ್ಲಿ ಕುಕ್ ಮತ್ತು ರೂಟ್ ಉತ್ತಮ ಫಾರಂನಲ್ಲಿದ್ದಾರೆ ಎಂದು ಮಿಸ್ಬಾ ಹೇಳಿದರು.
ಎದುರಾಳಿ ಮೇಲೆ ಒತ್ತಡ ಹಾಕಬೇಕಿದ್ದರೆ ಇವರಿಬ್ಬರನ್ನು ಮೊದಲಿಗೆ ಔಟ್ ತೆಗೆಯಬೇಕು. ಏಕೆಂದರೆ ಇವರಿಬ್ಬರು ಇಂಗ್ಲೆಂಡ್ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದಾರೆ ಎಂದು ಹೇಳಿದರು.
ಮಾನಸಿಕವಾಗಿ ಅದು ನಮಗೆ ಅನುಕೂಲ ಕಲ್ಪಿಸುತ್ತದೆ. ಏಕೆಂದರೆ ಇಂಗ್ಲೆಂಡ್‌ನ ಇತರ ಬ್ಯಾಟಿಂಗ್ ಲೈನ್‌ಅಪ್ ಈ ಕ್ಷಣಕ್ಕೆ ತಿಣುಕುತ್ತಿದ್ದು, ಅವರ ಮೇಲೆ ಒತ್ತಡ ಹಾಕುವುದಕ್ಕಾಗಿ ಇವರಿಬ್ಬರನ್ನು ಔಟ್ ತೆಗೆಯುವುದು ಅವಶ್ಯಕವಾಗಿದೆ ಎಂದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.