2016ರ ಒಲಿಂಪಿಕ್ಸ್‌ನಲ್ಲಿ ರಷ್ಯಾಗೆ ರಿಯೋ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ನ್ಯಾಯದ ತತ್ವದ ಮೇಲೆ ಆಧರಿಸಿದೆ ಮತ್ತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ತಿಳಿಸಿದ್ದಾರೆ. ಐಒಸಿಯ 129ನೇ ಸೆಷನ್‌ನಲ್ಲಿ ಮಾತನಾಡುತ್ತಾ ಅವರು ತಿಳಿಸಿದರು.
ರಷ್ಯಾ ವಿರುದ್ಧ ಸಂಪೂರ್ಣ ನಿಷೇಧ ವಿಧಿಸುವುದರಿಂದ ಐಒಸಿ ಎಕ್ಸಿಕ್ಯೂಟಿವ್ ಸಂಯಮ ತೋರಿಸಿ, ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅನುಮೋದನೆ ನೀಡುವ ಅಧಿಕಾರವನ್ನು ಅಂತಾರಾಷ್ಟ್ರೀಯ ಕ್ರೀಡಾಒಕ್ಕೂಟಗಳಿಗೆ ನೀಡಿತು. ಸರ್ಕಾರ ನಿಯಮಗಳನ್ನು ಉಲ್ಲಂಘಿಸಿದ್ದರೂ, ಯಾವುದೇ ಅಥ್ಲೀಟ್ ಈ ಉಲ್ಲಂಘನೆಯಲ್ಲಿ ಭಾಗಿಯಾಗಿಲ್ಲದಿದ್ದರೆ ಅವರಿಗೆ ಶಿಕ್ಷೆ ವಿಧಿಸಲಾಗದು. ಈ ತತ್ವವನ್ನು ಇಲ್ಲಿ ಅನುಸರಿಸಲಾಗಿದೆ ಎಂದು ಬಾಕ್ ಹೇಳಿದರು.
ಇದೊಂದು ನ್ಯಾಯಯುತ ನಿರ್ಧಾರವಾಗಿದ್ದು, ರಾಜಕೀಯದಿಂದ ಹೊರತಾಗಿದೆ ಎಂದು ಬಾಕ್ ನುಡಿದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ