ರಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 206 ರಾಷ್ಟ್ರಗಳು ಪಥಸಂಚಲನ ನಡೆಸುವಾಗ ಕೇವಲ ಏಳು ಅಥ್ಲೀಟ್‌ಗಳ ಪುಟಾಣಿ ತಂಡ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದೆ. ಪುಟ್ಟ ಅಟ್ಲಾಂಟಿಕ್ ದ್ವೀಪ ಬರ್ಮುಡಾ ಕಳಿಸುತ್ತಿರುವ ತಂಡಕ್ಕಿಂತ ಪಾಕಿಸ್ತಾನದಲ್ಲಿ ಒಬ್ಬರು ಕಡಿಮೆಯಾಗಿದ್ದಾರೆ.
ಇದಕ್ಕೆ ವಿರುದ್ಧವಾಗಿ ಭಾರತ ಪ್ರತಿನಿಧಿಸುವ ತಂಡದಲ್ಲಿ 119 ಕ್ರೀಡಾಳುಗಳಿದ್ದಾರೆ. ವಿಶ್ವ ದರ್ಜೆಯ ಕ್ರಿಕೆಟರುಗಳನ್ನು, ಹಾಕಿ ಆಟಗಾರರನ್ನು ಮತ್ತು ಸ್ಕ್ವಾಷ್ ಚಾಂಪಿಯನ್ನರನ್ನು ಪಾಕಿಸ್ತಾನ ಉತ್ಪಾದಿಸಿದರೂ, ಇದುವರೆಗೆ ಪಾಕಿಸ್ತಾನದ ಒಲಿಂಪಿಕ್ ಪದಕದ ಟ್ಯಾಲಿ ಕೇವಲ 10- ಹಾಕಿಯಲ್ಲಿ 8 ಪದಕ ಮತ್ತು ವೈಯಕ್ತಿಕವಾಗಿ 2 ಪದಕ.
ಬ್ರೆಜಿಲ್ ಒಲಿಂಪಿಕ್ಸ್ ಪಾಕಿಸ್ತಾನಕ್ಕೆ ಅವನತಿಯ ಸ್ಥಿತಿಯಾಗಿದ್ದು, ಫೀಲ್ಡ್ ಹಾಕಿಯಲ್ಲಿ ಅರ್ಹತೆ ಪಡೆಯಲು ಅದು ಮೊದಲ ಬಾರಿಗೆ ವಿಫಲವಾಗಿದೆ. ಹಿಂದೊಮ್ಮೆ ಪಾಕ್ ಅನುಭವಿಸಿದ್ದ ಕ್ರೀಡಾ ವೈಭವ ಈಗಿಲ್ಲ. 1994ರಲ್ಲಿ ಪಾಕಿಸ್ತಾನ ಫೀಲ್ಡ್ ಹಾಕಿ, ಹವ್ಯಾಸಿ ಸ್ನೂಕರ್, ಸ್ಕ್ವಾಷ್ ಮತ್ತು ಕ್ರಿಕೆಟ್‌ನಲ್ಲಿ ವಿಶ್ವ ಪ್ರಶಸ್ತಿಗಳನ್ನು ಗೆದ್ದಿತ್ತು. ಆದರೆ ಹಾಕಿ ಮಾತ್ರ ಒಲಿಂಪಿಕ್ ಕ್ರೀಡೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ