ಭಾರತದ ಟೆನ್ನಿಸ್ ಸ್ಟಾರ್ ಆಟಗಾರ ಲಿಯಾಂಡರ್ ಪೇಸ್ ತಮ್ಮ ಸ್ವಿಸ್ ಜೋಡಿ ಮಾರ್ಟಿನ್ ಹಿಂಗಿಸ್ ಜೊತೆಯಲ್ಲಿ ಅಮೆರಿಕ ಓಪನ್ ಮಿಶ್ರಿತ ಡಬಲ್ಸ್‌ನಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಈಗ ಅತ್ಯಧಿಕ ಸಂಖ್ಯೆಯ ಮಿಶ್ರಿತ ಡಬಲ್ಸ್ ಪ್ರಶಸ್ತಿಗಳು ಲಿಯಾಂಡರ್ ಪೇಸ್ ಬುಟ್ಟಿಗೆ ಬಿದ್ದಿದೆ.
ನಾಲ್ಕನೇ ಸೀಡ್ ಭಾರತ-ಸ್ವಿಸ್ ಜೋಡಿ ಸೀಡ್ ರಹಿತ ಅಮೆರಿಕನ್ನರಾದ ಮಾಟೆಕ್ -ಸ್ಯಾಂಡ್ಸ್ ಮತ್ತು ಸ್ಯಾಮ್ ಕ್ವೆರಿ ಅವರನ್ನು 6-4, 3-6 ಮತ್ತು 10-7ರಿಂದ ಫೈನಲ್‌ನಲ್ಲಿ ಸೋಲಿಸುವ ಮೂಲಕ ಇವರಿಬ್ಬರ ಜೋಡಿ ಮೂರನೇ ಪ್ರಮುಖ ಪ್ರಶಸ್ತಿಯನ್ನು ಈ ಸೀಸನ್‌ನಲ್ಲಿ ಗಳಿಸಿದೆ.
42 ವರ್ಷದ ಪಯಸ್ ಈಗ ಒಟ್ಟು 9 ಗ್ರಾಂಡ್ ಸ್ಲಾಮ್ ಮಿಶ್ರಿತ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದು, ಮಾಜಿ ಜತೆಗಾರ ಮಹೇಶ್ ಭೂಪತಿ ಅವರ 8 ಪ್ರಶಸ್ತಿಗಳ ದಾಖಲೆಯನ್ನು ಮುರಿದಿದ್ದಾರೆ.
ಪಯಸ್ ಅವರು 10 ಮಿಶ್ರಿತ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದ ಮಾರ್ಟಿನಾ ನರ್ವಾಟಿಲೋವಾ ಅವರಿಗಿಂತ ಒಂದು ಪ್ರಶಸ್ತಿಯಿಂದ ಹಿಂದಿದ್ದಾರೆ. ಈ 10 ಪ್ರಶಸ್ತಿಗಳ ಪೈಕಿ ನರ್ವಾಟಿಲೋವಾ ಪಯಸ್ ಜತೆ ಆಸ್ಟ್ರೇಲಿಯಾ ಓಪನ್ ಮತ್ತು 2003ರಲ್ಲಿ ವಿಂಬಲ್ಡನ್ ಹೀಗೆ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.