Select Your Language

Notifications

webdunia
webdunia
webdunia
webdunia

200 ಮೀ ಓಟಗಾರ ಧರಮ್‌ಬೀರ್ ಸಿಂಗ್ ರಿಯೋ ಕನಸು ಭಗ್ನ

dharambir singh
ನವದೆಹಲಿ , ಬುಧವಾರ, 3 ಆಗಸ್ಟ್ 2016 (10:06 IST)
ನವದೆಹಲಿ: 36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಮೊದಲ ಭಾರತೀಯ ಅಥ್ಲೀಟ್ 200 ಮೀ ಓಟಗಾರ ಧರಮ್‌ಬೀರ್ ಸಿಂಗ್ ಅವರು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲರಾದ್ದರಿಂದ ರಿಯೋಗೆ ಪ್ರಯಾಣಿಸುತ್ತಿಲ್ಲ.

ಧರಮ್‌ಬೀರ್ ರಿಯೋಗೆ ಮಂಗಳವಾರ ಬೆಳಿಗ್ಗೆ ಪ್ರಯಾಣಿಸಬೇಕಿತ್ತು. ಆದರೆ ನಾಡಾ ನಡೆಸಿದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದರಿಂದ ರಿಯೋಗೆ ತೆರಳದಂತೆ ಸೂಚಿಸಲಾಗಿದೆ.
 
 ರಿಯೋ ಒಲಿಂಪಿಕ್ಸ್‌ಗೆ ಭಾರತದ ತಂಡದ ಕೆಲವು ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವನೆ ವಿವಾದಕ್ಕೆ ಸಿಲುಕಿ ನಲುಗಿದ್ದಾರೆ. ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಪರೀಕ್ಷೆಯಲ್ಲಿ ವಿಫಲರಾದ ಬಳಿಕ ನಾಡಾ ಅಮಾನತುಗೊಳಿಸಿ ಬಳಿಕ ವಿಚಾರಣೆ ನಡೆಸಿ ರಿಯೋದಲ್ಲಿ ಭಾಗವಹಿಸಲು ಅವಕಾಶ ನೀಡಿದೆ.

 ಶಾಟ್‌ಪುಟ್ ಎಸೆತಗಾರ ಇಂದರ್‌ಜೀತ್ ಸಿಂಗ್ ಕೂಡ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ವಿಫಲವಾಗಿದ್ದು, ಅವರ ಬಿ ಸ್ಯಾಂಪಲ್‌ನಲ್ಲಿ  ಕೂಡ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ರಿಯೋಗೆ ಹೋಗದಂತೆ ನಿಷೇಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಬಿಸಿಸಿಐ ಪದಾಧಿಕಾರಿಗಳಿಂದ ಕಾನೂನುಬಾಹಿರ ಹುದ್ದೆ: ಆದಿತ್ಯ ವರ್ಮಾ ಆರೋಪ