9 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ ಆಸ್ಟ್ರೇಲಿಯಾದ ಸಾಮ್ ಗ್ರಾಥ್ ಅವರನ್ನು 6-1, 6-1 ಮತ್ತು 6-1 ಸೆಟ್‌ಗಳಿಂದ ಸೋಲಿಸುವ ಮೂಲಕ ಫ್ರೆಂಚ್ ಓಪನ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ನಾಲ್ಕನೇ ಸೀಡ್ ನಡಾಲ್ ಪ್ಯಾರಿಸ್‌ನಲ್ಲಿ 71 ಜಯಗಳು ಮತ್ತು 2 ಸೋಲುಗಳೊಂದಿಗೆ ಒಟ್ಟಾರೆ ದಾಖಲೆಯನ್ನು ನಿರ್ಮಿಸಿದ್ದಾರೆ.
ದೊಡ್ಡ ಸರ್ವ್ ಮಾಡುತ್ತಿದ್ದ ಗ್ರಾಥ್ ಅವರನ್ನು ಕೇವಲ 80 ನಿಮಿಷಗಳಲ್ಲಿ ಸೋಲಿಸಿದ ಸ್ಪೇನ್ ಆಟಗಾರ ಈ ಪ್ರಕ್ರಿಯೆಯಲ್ಲಿ ಕೇವಲ 2 ತಪ್ಪುಗಳನ್ನು ಮಾತ್ರ ಎಸಗಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಮುಂದಿನ ಪಂದ್ಯದಲ್ಲಿ ಅವರು ಅರ್ಜೆಂಟಿನಾದ ಫಾಕುಂಡೊ ಬಾಗ್ನಿಸ್ ಅಥವಾ ಫ್ರೆಂಚ್ ಕ್ವಾಲಿಫೈಯರ್ ಕೆನ್ನಿ ಡಿ ಸ್ಕೇಪೆರ್ ಅವರನ್ನು ಎದುರಿಸಲಿದ್ದಾರೆ.