ಅಯೋಧ್ಯೆ: ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ಮಹತ್ವದ ದಿನ. ಇಂದು ರಾಮಮಂದಿರದ ಮೇಲೆ ರಘುವಂಶದ ಕೇಸರಿ ಧ್ವಜ ರಾರಾಜಿಸಲಿದೆ. ಪ್ರಧಾನಿ ಮೋದಿ ಭಗವಧ್ವಜಾರೋಹಣ ನೆರವೇರಿಸಲಿದ್ದಾರೆ.
ರಾಮಮಂದಿರದ ಗೋಪುರದ ಮೇಲೆ 22 ಅಡಿ ಎತ್ತರದ ಭಗವಾಧ್ವಜ ರಾರಾಜಿಸಲಿದೆ. ರಾಮಜನ್ಮಭೂಮಿ ಟ್ರಸ್ಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಧಾರ್ಮಿಕ ವಿಧಾನಗಳ ಪ್ರಕಾರ ಧ್ವಜಾರೋಹಣ ನೆರವೇರಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.
ಈ ಕೇಸರಿ ಧ್ವಜಕ್ಕೆ ಅದರದ್ದೇ ಆದ ವಿಶೇಷತೆಯಿದೆ. ರಾಮ ರಾಜ್ಯದ ಸಂದೇಶವುಳ್ಳ ವಿಶೇಷ ಧ್ವಜ ಇದಾಗಿದೆ. ಈ ಧರ್ಮಧ್ವಜ 10 ಅಡಿ ಎತ್ತ, 20 ಅಡಿ ಉದ್ದವಿದೆ. ರಾಮ ಸೂರ್ಯವಂಶದವನು. ಹೀಗಾಗಿ ಧ್ವಜದಲ್ಲಿ ರಾಮನ ಶೌರ್ಯದ ಪ್ರತೀಕವಾದ ಸೂರ್ಯನ ವಿಕಿರಣ, ಸೂರ್ಯನ ಚಿತ್ರ ಹೊಂದಿದೆ. ಅದರ ಮೇಲೆ ಓಂ ಮತ್ತು ಕೋವಿದಾರ ಮರದ ಚಿತ್ರವಿದೆ.
ಈ ಮೂಲಕ ರಾಮಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಈ ಹಿಂದೆ ರಾಮಮಂದಿರ ಉದ್ಘಾಟನೆಯಾಗಿದ್ದರೂ ಮುಖ್ಯ ಗುಡಿ ಕೆಲಸಗಳು ಮಾತ್ರ ಪೂರ್ಣಗೊಂಡಿತ್ತು. ಇದೀಗ ರಾಮಮಂದಿರ ಸಂಪೂರ್ಣ ಸಿದ್ಧವಾಗಿದೆ.