Select Your Language

Notifications

webdunia
webdunia
webdunia
webdunia

ನಿತೀಶ್ ಕುಮಾರ್ ಪದೇ ಪದೇ ಮೋದಿ ಕಾಲಿಗೆ ಬೀಳೋದ್ಯಾಕೆ: ವಿಡಿಯೋ ನೋಡಿ ಕೆಲವರಿಗೆ ಉರಿ

Nitish Kumar-Modi

Krishnaveni K

ಪಾಟ್ನಾ , ಶುಕ್ರವಾರ, 21 ನವೆಂಬರ್ 2025 (10:40 IST)
Photo Credit: X
ಪಾಟ್ನಾ: ಮತ್ತೊಮ್ಮೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಕಾಲಿಗೆ ಬೀಳುವ ವಿಡಿಯೋ ವೈರಲ್ ಆಗುತ್ತಿದ್ದಂತೇ ಕೆಲವರು ಪದೇ ಪದೇ ಕಾಲಿಗೆ ಬೀಳೋದ್ಯಾಕೆ ಎಂದು ಕಿಡಿ ಕಾರಿದ್ದಾರೆ.

ಈ ಹಿಂದೆಯೂ ಒಮ್ಮೆ ವೇದಿಕೆಯಲ್ಲೇ ಪ್ರಧಾನಿ ಮೋದಿ ಕಾಲಿಗೆ ನಿತೀಶ್ ಕುಮಾರ್ ನಮಸ್ಕರಿಸಲು ಹೋದ ವಿಡಿಯೋ ವೈರಲ್ ಆಗಿತ್ತು. ಇದೀಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. ವಾಪಸಾಗುವಾಗ ವಿಮಾನ ನಿಲ್ದಾಣದವರೆಗೂ ನಿತೀಶ್ ಕುಮಾರ್ ಬಂದು ಬೀಳ್ಕೊಟ್ಟಿದ್ದಾರೆ.

ಈ ವೇಳೆ ನಿತೀಶ್ ತಲೆ ಬಾಗಿ ಮೋದಿ ಕಾಲಿಗೆ ಬೀಳಲು ಹೊರಟಿದ್ದಾರೆ. ಆದರೆ ಇದನ್ನು ಮೋದಿ ತಡೆದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಒಂದೇ ವಯಸ್ಸಿನವರು. ಹಾಗಿದ್ದರೂ ನಿತೀಶ್ ಪದೇ ಪದೇ ಮೋದಿ ಕಾಲಿಗೆ ಬೀಳುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಈ ಹಿಂದೆ ನಿತೀಶ್ ಕುಮಾರ್ ಗೆ ಮೋದಿ ಬಗ್ಗೆ ಅಸಮಾಧಾನವಿತ್ತು. ಆದರೆ ಈಗ ಅವರಾಗಿಯೇ ಕಾಲಿಗೆ ಬೀಳುವಷ್ಟು ಗೌರವ ಉಂಟಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ದರೋಡೆ ಪ್ರಕರಣ: ಪೊಲೀಸರ ಕಣ್ತಪ್ಪಿಸಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಹಿರಂಗ