ಬೆಂಗಳೂರು: ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ದರೋಡೆಕೋರರು ಏನೆಲ್ಲಾ ಸಂಚು ಮಾಡಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗುತ್ತಿದೆ.
ದರೋಡೆ ನಡೆದು ಎರಡು ದಿನವಾಗಿದ್ದರೂ ಇನ್ನೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಇದರ ಬಗ್ಗೆ ವಿಪಕ್ಷ ಬಿಜೆಪಿ ಟೀಕೆ ನಡೆಸುತ್ತಿದೆ. ಇತ್ತ ಪೊಲೀಸರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗುತ್ತಿದೆ.
ದರೋಡೆಕೋರರು ತಮ್ಮ ಪತ್ತೆಯಾಗಬಾರದು ಎಂಬ ಕಾರಣಕ್ಕೆ ನಾರ್ಮಲ್ ಕಾಲ್ ಬಳಸದೇ ವ್ಯಾಟ್ಸಪ್ ಕಾಲ್ ಬಳಸಿ ಮಾತುಕತೆ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರಿಗೆ ಆರಂಭದಲ್ಲೇ ಅವರು ಎಲ್ಲಿಂದ ಬಂದರು, ಎಲ್ಲಿಗೆ ಹೋದರು ಎಂದು ಪತ್ತೆ ಹಚ್ಚಲು ಕಷ್ಟವಾಗಿದೆ.
ಹೀಗಾಗಿ ಪೊಲೀಸರು ಈಗ ಅನಿವಾರ್ಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ ಈಗಾಗಲೇ ದರೋಡೆಕೋರರು ಆಂಧ್ರಪ್ರದೇಶ ಅಥವಾ ತಮಿಳುನಾಡಿಗೆ ಎರಡು ತಂಡಗಳಾಗಿ ತಲೆಮರೆಸಿಕೊಂಡಿರುವ ಶಂಕೆಯಿದೆ. ಸದ್ಯದಲ್ಲೇ ಆರೋಪಿಗಳು ಪೊಲೀಸರ ಬಲೆಗೆ ಬೀಳುವ ನಿರೀಕ್ಷೆಯಿದೆ.