Select Your Language

Notifications

webdunia
webdunia
webdunia
webdunia

ಅಯೋಧ್ಯೆ ರಾಮಮಂದಿರದ ಮುಡಿಗೆ ಭಗವಾಧ್ವಜವೇರಿದ ಆ ಕ್ಷಣ ಹೇಗಿತ್ತು: ವಿಡಿಯೋ ನೋಡಿ

Ayodhya Ramamandir

Krishnaveni K

ಅಯೋಧ್ಯೆ , ಮಂಗಳವಾರ, 25 ನವೆಂಬರ್ 2025 (14:03 IST)
Photo Credit: X
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮಮಂದಿರದ ಮೇಲೆ ಭಗವಾಧ್ವಜಾರೋಹಣ ನೆರವೇರಿದೆ. ಆ ಕ್ಷಣ ಹೇಗಿತ್ತು ಇಲ್ಲಿದೆ ವಿಡಿಯೋ.

ಇಂದು ಪ್ರಧಾನಿ ಮೋದಿ, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಗವಾಧ್ವಜಾರೋಹಣದ ವೇಳೆ ವೇದಿಕೆಯಲ್ಲಿದ್ದರು. ಪ್ರಧಾನಿ ಮೋದಿ ಮತ್ತು ಮೋಹನ್ ಭಾಗವತ್ ಧ್ವಜಾರೋಹಣ ಮಾಡಿದರು.

ಈ ಕ್ಷಣಕ್ಕೆ ಸಾವಿರಾರು ಭಕ್ತರು ಪ್ರತ್ಯಕ್ಷ ಸಾಕ್ಷಿಯಾದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ ಇದು ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆ, ಸಂಸ್ಕೃತಿಯ ಪುನರುತ್ಥಾನವಾಗಿದೆ. ಕೇಸರಿ ಬಣ್ಣ, ಕೋವಿದಮರ ಮತ್ತು ಸೂರ್ಯವಂಶದ ಚಿಹ್ನೆಗಳು ರಾಮ ರಾಜ್ಯದ ವೈಭವದ ಪ್ರತೀಕವಾಗಿದೆ. ಇದು 100 ವರ್ಷಗಳ ಪರಿಶ್ರಮದ ಸಂಕೇತವಾಗಿದೆ. ಮುಂಬರುವ ಸಾವಿರಾರು ವರ್ಷಗಳವರೆಗೆ ರಾಮ ರಾಜ್ಯದ ವೈಭವವನ್ನು ಸಾರುವ ಸಂಕೇತವಾಗಲಿದೆ. ಸತ್ಯವೇ ಧರ್ಮ. ಇಲ್ಲಿ ತಾರತಮ್ಯ ಅಥವಾ ನೋವಿಗೆ ಜಾಗವಿಲ್ಲ. ಬಡತನ, ಅಸಹಾಯಕತೆಗೆ ಜಾಗವಿಲ್ಲ, ಸಂತೋಷ ಮತ್ತು ನೆಮ್ಮದಿ ಮಾತ್ರ ಇರಬೇಕು ಎಂದು ಭಾಷಣದಲ್ಲಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವತಿಯಿಂದ ಸಂವಿಧಾನ ಮತ್ತು ಅಂಬೇಡ್ಕರ್ ಗಾಗಿ ವಿಶೇಷ ಕಾರ್ಯಕ್ರಮ