Publish Date: Wed, 11 Sep 2024 (15:47 IST)
Updated Date: Wed, 11 Sep 2024 (15:50 IST)
ಬಳ್ಳಾರಿ: ಪತಿಯನ್ನು ಭೇಟಿಯಾಗಲು ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿರುವುದಾಗಿ ಜೈಲಾಧಿಕಾರಿಗಳಿಗೆ ಹೇಳಿದ್ದ ವಿಜಯಲಕ್ಷ್ಮೀ ಇದೀಗ ದಿಢೀರನೆ ಭೇಟಿಯನ್ನು ರದ್ದು ಮಾಡಿದ್ದಾರೆ.
ನಿನ್ನೆ ಪತ್ನಿ ಜತೆ ಜೈಲಿನ ದೂರವಾಣಿ ಮೂಲಕ ಮಾತನಾಡಿದ ದರ್ಶನ್ ಅವರು ನಾಳೆ ಬಳ್ಳಾರಿ ಜೈಲಿಗೆ ಬಂದು ಭೇಟಿಯಾಗುವಂತೆ ಪತ್ನಿಗೆ ಹೇಳಿಕೊಂಡಿದ್ದರು. ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲು ಪತ್ನಿಯನ್ನು ಬರ ಹೇಳಿರುವುದಾಗಿ ಹೇಳಲಾಗಿತ್ತು.
ಅದರಂತೆ ಇಂದು ವಿಜಯಲಕ್ಷ್ಮೀ ಹಾಗೂ ತಾಯಿ ಮೀನಾ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಭೇಟಿಯಾಗುವುದಾಗಿ ಜೈಲಾಧಿಕಾರಿಗಳ ಬಳಿ ಹೇಳಲಾಗಿತ್ತು. ಇದೀಗ ಭೇಟಿಯನ್ನು ವಿಜಯಲಕ್ಷ್ಮೀ ಅವರು ದಿಢೀರನೇ ರದ್ದು ಮಾಡಿರುವುದಾಗಿ ತಿಳಿದುಬಂದಿದೆ.
ಇತ್ತ ದರ್ಶನ್ ಅವರು ಜಾರ್ಜ್‌ಶೀಟ್‌ನಲ್ಲಿರುವ ಭಯಾನಕ ವಿಚಾರಗಳು ಬಯಲಾಗುತ್ತಿದ್ದ ಹಾಗೇ ಚಿಂತೆಗೆ ಒಳಗಾಗಿದ್ದಾರೆ. ಇಂದಿನ ಬೆಳಗ್ಗಿನ ಉಪಹಾರವನ್ನು ಬೇಡ ಎಂದಿರುವ ದರ್ಶನ್ ಅವರು ಡ್ರೈ ಪ್ರೂಟ್ಸ್ ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಪ್ರಕರಣದಿಂದ ಪತಿ ದರ್ಶನ್ ಅವರು ಹೊರತರಲು ಕಾನೂನು ಹೋರಾಟದ ಜತೆಗೆ ವಿಜಯಲಕ್ಷ್ಮೀ