Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

Madhu Bangarappa

Krishnaveni K

ಬೆಂಗಳೂರು , ಶನಿವಾರ, 14 ಜೂನ್ 2025 (14:01 IST)
ಬೆಂಗಳೂರು: ಶಿಕ್ಷಣ ಸಚಿವರಾಗಿ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಮಧು ಬಂಗಾರಪ್ಪ ತಮ್ಮ ಇಲಾಖೆ ಪ್ರಗತಿ ಸಾಧಿಸಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಸರ್ ಕೂಡಾ ಮೆಚ್ಚಿದ್ದಾರೆ ಎಂದಿದ್ದಾರೆ.

‘ನನ್ನ ಇಲಾಖೆ ಬೇರೆ ಇಲಾಖೆಯಂತಲ್ಲ. ಇಲ್ಲಿ ಪ್ರಗತಿ ಕಣ್ಣಿಗೆ ಕಾಣಿಸಲ್ಲ. ಆದರೆ ಶಿಕ್ಷಣ ಎಂದರೆ ದೇವರ ಕೆಲಸ. ನನ್ನ ಇಲಾಖೆಯಲ್ಲಿ ಬಹಳ ಸಮಸ್ಯೆಗಳಿತ್ತು. ಹೀಗಾಗಿ ಸ್ವಲ್ಪ ಹುಷಾರಾಗಿ ನೋಡ್ಕೊಂಡು ಮಾಡು ಎಂದು ಮುಖ್ಯಮಂತ್ರಿಗಳು ನನಗೆ ಅಧಿಕಾರ ಕೊಟ್ರು.

ನಿನ್ನೆ ನನ್ನ ಇಲಾಖೆಯ ಅಧಿಕಾರ ವಹಿಸಿ ಒಂದು ವರ್ಷವಾಗಿದೆ. ಒಂದೇ ವರ್ಷ ಮೂರು ಅವಕಾಶ ಕೊಟ್ಟ ಏಕೈಕ ರಾಜ್ಯ ನಮ್ಮದು. ಫೇಲ್ ಆದ ವಿದ್ಯಾರ್ಥಿಗಳಿಗೆ ಒಂದೇ ವರ್ಷದಲ್ಲಿ ಇಂಪ್ರೂವ್ ಮಾಡಲು ನಾವು ಅವಕಾಶ ಕೊಟ್ಟಿದ್ದೇವೆ. ಯಾವುದೇ ಫೀಸ್ ಇಲ್ಲದೇ ನಾವು ಪಾಸ್ ಆಗದೇ ಇರುವವರಿಗೆ ಅವಕಾಶ ಕೊಟ್ಟಿದ್ದೇವೆ.

ಮೊನ್ನೆ ರಿಸಲ್ಟ್ ಘೋಷಣೆ ಮಾಡಿದಾಗ ಮುಖ್ಯಮಂತ್ರಿಗಳು ವೆರಿ ಗುಡ್ ಮಧು ಎಂದರು. 84 ಸಾವಿರ ಮಕ್ಕಳು ಒಂದೆರಡು ವಿಷಯದಲ್ಲಿ ಕಳೆದುಕೊಂಡವರು ಎಲ್ಲರೂ ಪಾಸ್ ಆಗಿದ್ದಾರೆ. ಈವತ್ತು 51 ಮಕ್ಕಳು 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಪೂರ್ಣ ಅಂಕ ಪಡೆದುಕೊಂಡವರು ಸರ್ಕಾರೀ ಶಾಲೆಯಲ್ಲೂ ಇದ್ದಾರೆ. ಇದು ಪ್ರಗತಿ’ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್