Select Your Language

Notifications

webdunia
webdunia
webdunia
webdunia

ಟೀಕೆಗಳ ಬಳಿಕ ಕೊನೆಗೂ ಹಣಕಾಸು ಆಯೋಗದ ಸಭೆಗೆ ಹೋಗಲು ತೀರ್ಮಾನಿಸಿದ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಗುರುವಾರ, 12 ಜೂನ್ 2025 (09:44 IST)
ಬೆಂಗಳೂರು: ಕೇಂದ್ರ ಸರ್ಕಾರ ಅನುದಾನ ಕೊಡಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಕೇಂದ್ರದಲ್ಲಿ ನಡೆಯುವ ಮಹತ್ವದ ಸಭೆಗಳಿಗೆ ಹಾಜರಾಗಲ್ಲ ಎನ್ನುವ ಅಪವಾದವಿದೆ. ಇದೀಗ ಟೀಕೆಗಳ ಬಳಿಕ ಕೊನೆಗೂ ದೆಹಲಿಯಲ್ಲಿ ನಡೆಯಲಿರುವ ಹಣಕಾಸು ಆಯೋಗದ ಸಭೆಗೆ ಹೋಗಲು ತೀರ್ಮಾನಿಸಿದ್ದಾರೆ.

ಈ ಹಿಂದೆ ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಹೋಗಿರಲಿಲ್ಲ. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ರಾಜ್ಯಕ್ಕೆ ಅನುದಾನ ಕೊಡಲ್ಲ ಎನ್ನುತ್ತಾರೆ. ಆದರೆ ಏನೋ ನೆಪ ಹೇಳಿ ಇಂತಹ ಮಹತ್ವದ ಸಭೆಗಳಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಟೀಕೆಗೊಳಗಾಗಿದ್ದರು.

ಆದರೆ ಈ ಬಾರಿ ಹಣಕಾಸು ಆಯೋಗದ ಸಭೆಗೆ ಸಿಎಂ ಭಾಗಿಯಾಗಲು ತೀರ್ಮಾನಿಸಿದ್ದಾರೆ. ಮೊನ್ನೆಯಷ್ಟೇ ದೆಹಲಿಯಲ್ಲ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದ ಸಿಎಂ ಇಂದು ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಬಾರಿ ಎರಡು ದಿನ ಅವರು ದೆಹಲಿಯಲ್ಲಿ ಬೀಡು ಬಿಡಲಿದ್ದಾರೆ.

ಮೊದಲು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದು, ರಾಜ್ಯದ ಹಲವು ಬೇಡಿಕೆಗಳನ್ನು ಮುಂದಿಡಲಿದ್ದಾರೆ. ಇದಾದ ಬಳಿಕ ಹಣಕಾಸು ಆಯೋಗದ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್