Publish Date: Sat, 14 Jun 2025 (13:52 IST)
Updated Date: Sat, 14 Jun 2025 (13:55 IST)
ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನವಾಗುವ ಮೊದಲು ಎಟಿಸಿ ಕೇಂದ್ರಕ್ಕೆ ಮೇಡೇ ಎಂದು ಮಾತ್ರವಲ್ಲ, ಪೈಲಟ್ ಹೀಗೊಂದು ಮಹತ್ವದ ಸಂದೇಶ ರವಾನಿಸಿದ್ದರು ಎಂಬುದು ಈಗ ಬಯಲಾಗಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಮೊನ್ನೆ ಮಧ್ಯಾಹ್ನ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 274 ಮಂದಿ ಮೃತಪಟ್ಟಿದ್ದಾರೆ. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಪತನಗೊಂಡಿದೆ. ಇದರಲ್ಲಿ 242 ಪ್ರಯಾಣಿಕದ್ದರು.
ವಿಮಾನ ಟೇಕ್ ಆಫ್ ಆಗುವಾಗಲೇ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಪೈಲಟ್ ಎಟಿಸಿ ಕೇಂದ್ರಕ್ಕೆ ಅಪಾಯವಿದೆ ಎಂದು ಸಾರುವ ಮೇಡೇ ಸಂದೇಶ ಕಳುಹಿಸಿದ್ದ. ಎಟಿಸಿ ಕೇಂದ್ರಕ್ಕೆ ಪೈಲಟ್ ನೀಡಿದ ಸಂದೇಶ ಏನೆಂದು ಈಗ ಬಯಲಾಗಿದೆ. ಆತ ಕೇವಲ ಮೇಡೇ ಎಂದು ಮಾತ್ರ ಹೇಳಿರಲಿಲ್ಲ.
ಜೊತೆಗೆ ತಮಗಿರುವ ಅಪಾಯವನ್ನೂ ವಿವರಿಸಿ ಹೇಳಿದ್ದ. ಮೇಡೇ.. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ. ಟೇಕಾಫ್ ಗೆ ಪ್ರೆಷರ್ ಸಾಕಾಗುತ್ತಿಲ್ಲ. ನಾವು ಅಪಾಯದಲ್ಲಿದ್ದೇವೆ ಎಂದು ಪೈಲಟ್ ಹೇಳಿದ್ದರು. ಇದಾದ ಬಳಿಕ ಸಂಪರ್ಕ ಕಡಿತಗೊಂಡಿದೆ. ಎಟಿಸಿ ಕೇಂದ್ರದಿಂದ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.