Select Your Language

Notifications

webdunia
webdunia
webdunia
webdunia

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

Gold price
ಬೆಂಗಳೂರು: ಕಳೆದ ಎರಡು ದಿನಗಳಿಂದ ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗುತ್ತಿದೆ. ಇಂದಂತೂ ದಾಖಲೆಯ ಬೆಲೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ವಾರದ ಆರಂಭದಲ್ಲಿ ಲಕ್ಷದ ಗಡಿಯಲ್ಲಿದ್ದ ಚಿನ್ನದ ದರ ಈಗ ಲಕ್ಷ ದಾಟಿ ದಾಖಲೆ ಮಾಡಿದೆ. ಪರಿಶುದ್ಧ ಚಿನ್ನದ ದರ ಕೇಳಿದರೇ ಶಾಕ್ ಆಗುವಂತಿದೆ. ನಿನ್ನೆ ಏಕಾಏಕಿ ಭಾರೀ ಏರಿಕೆಯಾಗಿದ್ದ ಚಿನ್ನದ ದರ ಇಂದು ಮತ್ತಷ್ಟು ಏರಿಕೆ ಕಂಡಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 1,00, 905.00 ರೂ.ಗಳಷ್ಟಿತ್ತು. ಇಂದು ಭಾರೀ ಏರಿಕೆಯಾಗಿದ್ದು 1,02, 755.00 ರೂ.ಗಳಿಗೆ ಬಂದು ನಿಂತಿದೆ. ಇದು ಸರ್ವಕಾಲಿಕ ದಾಖಲೆಯಾಗಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಮಟ್ಟಿಗೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 28 ರೂ. ಏರಿಕೆಯಾಗಿದ್ದು 10,168 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 25 ರೂ. ಏರಿಕೆಯಾಗಿದ್ದು 9,320 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 21 ರೂ. ಏರಿಕೆಯಾಗಿದ್ದು 7,626 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಇನ್ನೂ ಕಡಿಮೆಯಾಗಿಲ್ಲ. ಇಂದು ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ.  ಇಂದು ಪ್ರತೀ ಕೆ.ಜಿ. ಬೆಳ್ಳಿ ದರ 1,10, 000 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ