Select Your Language

Notifications

webdunia
webdunia
webdunia
webdunia

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

gold
ಬೆಂಗಳೂರು: ಕಳೆದ ವಾರವಿಡೀ ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಇತ್ತು. ಪರಿಶುದ್ಧ ಚಿನ್ನದ ದರ ಲಕ್ಷದಲ್ಲಿತ್ತು. ಈ ವಾರದ ಆರಂಭದ ದಿನದಲ್ಲೇ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ದರ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣವಿಲ್ಲ ಎಂದು ಗ್ರಾಹಕರಿಗೆ ಆತಂಕವಾಗಿತ್ತು. ಕಳೆದ ವಾರ ಸತತವಾಗಿ ಚಿನ್ನದ ದರ ಏರಿಕೆಯಾಗಿತ್ತು. ಆದರೆ ಈಗ ವಾರದ ಆರಂಭದಲ್ಲೇ ಕೊಂಚ ಇಳಿಕೆ ಕಂಡುಬರುತ್ತಿದೆ. ಆದರೂ ಕಡಿಮೆ ಎನ್ನುವಷ್ಟು ಏನೂ ಆಗಿಲ್ಲ ಎನ್ನಬಹುದು. ಇಂದು ಪರಿಶುದ್ಧ ಚಿನ್ನದ ದರ ಲಕ್ಷದೊಳಗೆ ಬಂದು ನಿಂತಿದೆ. ಇಂದು 99,160.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 28 ರೂ. ಇಳಿಕೆಯಾಗಿದ್ದು 9,769 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 25 ರೂ. ಇಳಿಕೆಯಾಗಿದ್ದು 8,955 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 21 ರೂ. ಇಳಿಕೆಯಾಗಿದ್ದು 7,327 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಇನ್ನೂ ಕಡಿಮೆಯಾಗಿಲ್ಲ. ಆದರೆ ಹೆಚ್ಚಾಗಿಲ್ಲ ಎನ್ನುವುದೇ ಸಮಾಧಾನಕರ ವಿಷಯ. ಇಂದೂ ಬೆಳ್ಳಿ ದರ 1,07, 000 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Viral video: ಕಾಲ್ತುಳಿತವಾದಾಗ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು, ವೈರಲ್ ವಿಡಿಯೋ ನೋಡಿ