Select Your Language

Notifications

webdunia
webdunia
webdunia
webdunia

Gold price today: ಅಬ್ಬಾ.. ಚಿನ್ನದ ದರ ಕೇಳಿದ್ರೇ ಶಾಕ್

Gold

Krishnaveni K

ಬೆಂಗಳೂರು , ಶುಕ್ರವಾರ, 6 ಜೂನ್ 2025 (11:04 IST)
ಬೆಂಗಳೂರು: ಚಿನ್ನದ ದರ ಖರೀದಿದಾರರಿಗೆ ಇಂದೂ ಶಾಕಿಂಗ್ ಸುದ್ದಿ. ಚಿನ್ನದ ದರ ಈಗ ಲಕ್ಷ ದಾಟಿದ್ದು, ದರ ಕೇಳಿದ್ರೆ ಶಾಕ್ ಆಗುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ದರ ಸದ್ಯಕ್ಕತೆ ಇಳಿಕೆಯಾಗುವ ಲಕ್ಷಣವಿಲ್ಲ ಎಂದು ಈಗಿನ ಟ್ರೆಂಡ್ ಗಮನಿಸಿದರೆ ಪಕ್ಕಾ ಆಗುತ್ತದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರ ಕೊಂಚ ಮಟ್ಟಿಗೆ ಏರಿಕೆಯಾಗುತ್ತಲೇ ಇತ್ತು. ಆದರೆ ನಿನ್ನೆ ಪರಿಶುದ್ಧ ಚಿನ್ನದ ದರ ಲಕ್ಷ ದಾಟಿತ್ತು. ಇಂದೂ ಅದು ಮುಂದುವರಿದಿದೆ. ನಿನ್ನೆ ಪರಿಶುದ್ಧ ಚಿನ್ನದ ದರ ಲಕ್ಷ ದಾಟಿದ್ದ 99.9 ಪರಿಶುದ್ಧತೆಯ ಚಿನ್ನದ ದರ ಇಂದು 1,01,220.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ  ಯಥಾಸ್ಥಿತಿಯಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 9,960 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 9,130 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 7,470 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಇಂದೂ ಭಾರೀ ಏರಿಕೆಯಾಗಿದೆ. ಇಂದು ಮತ್ತೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 3,000 ರೂ. ಏರಿಕೆಯಾಗಿದೆ. ಇಂದೂ ಬೆಳ್ಳಿ ದರ 1,07, 000 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Seemanth Kumar: ಬೆಂಗಳೂರು ಹೊಸ ಕಮಿಷನರ್ ಸೀಮಂತ ಕುಮಾರ್ ಎಲ್ಲಿಯವರು, ಅವರ ಹಿನ್ನಲೆಯೇನು