Publish Date: Sat, 31 May 2025 (11:29 IST)
Updated Date: Sat, 31 May 2025 (11:31 IST)
ಬೆಂಗಳೂರು: ಚಿನ್ನ ಖರೀದಿ ಮಾಡಬೇಕೆಂದುಕೊಂಡಿದ್ದವರಿಗೆ ಕೊಂಚ ಸಮಾಧಾನಕರ ಸುದ್ದಿ. ಇಂದು ಪರಿಶುದ್ಧ ಚಿನ್ನದ ಇಳಿಕೆಯಾಗಿದ್ದರೆ, ಇತರೆ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ನಿನ್ನೆ ಇಂದು ಪರಿಶುದ್ಧ ಚಿನ್ನದ ದರ ಇಂದು ಕೊಂಚವೇ ಹೆಚ್ಚಾಗಿತ್ತು. ಹೀಗಾಗಿ ಮತ್ತೆ ಚಿನ್ನದ ದರ ಏರು ಗತಿಯಲ್ಲಿ ಸಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಮತ್ತೆ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ 98,510 ರೂ.ಗೆ ಬಂದು ನಿಂತಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ನಿನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಯಥಾಸ್ಥಿತಿಯಲ್ಲಿದೆ. 22 ಕ್ಯಾರೆಟ್ ಚಿನ್ನದ ಬೆಲೆ 9,731 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ 8,920 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ 7,299 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಕಳೆದ ಎರಡು ದಿನಗಳಿಂದ ಬೆಳ್ಳಿ ದರವೂ ಏರಿಕೆ ಅಥವಾ ಇಳಿಕೆಯಾಗಿರಲಿಲ್ಲ. ಬೆಳ್ಳಿ ದರ ಯಥಾಸ್ಥಿತಿಯಲ್ಲಿತ್ತು. ಮೊನ್ನೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 100 ರೂ. ಇಳಿಕೆಯಾಗಿತ್ತು. ಇಂದೂ ಬೆಳ್ಳಿ ದರ ಯಥಾಸ್ಥಿತಿಯಲ್ಲಿದ್ದು 99, 900 ರೂ.ಗಳಷ್ಟಿದೆ.