Daily Horoscope

Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Gold
ಬೆಂಗಳೂರು: ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಲಕ್ಷದ ಗಡಿ ತಲುಪಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು ಸಮಾಧಾನ ತಂದಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಲು ಆರಂಭವಾಗಿತ್ತು. ಲಕ್ಷದ ಗಡಿ ತಲುಪಿದ್ದ ಚಿನ್ನದ ದರ ಈ ವಾರವೂ ಇಳಿಕೆಯಾಗುವ ಲಕ್ಷಣ ಕಾಣುತ್ತಿರಲಿಲ್ಲ. ಆದರೆ ಇಂದು ಪರಿಶುದ್ಧ ಚಿನ್ನದ ದರ ಇಂದು ಕೊಂಚವೇ ಕಮ್ಮಿಯಾಗಿದೆ. ಹಾಗಿದ್ದರೂ ಗ್ರಾಹಕರು ಸಮಾಧಾನಪಡುವಂತಿಲ್ಲ. ಇಂದು ಪರಿಶುದ್ಧ ಚಿನ್ನದ ದರ 98,510 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 9,813 ರೂ. ರಷ್ಟಿತ್ತು. ಇಂದು 9,748 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 8,995 ರೂ. ಗಳಷ್ಟಿದ್ದರೆ ಇಂದು 8,935 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ಗ್ರಾಂಗೆ 7,360 ರೂ. ರಷ್ಟಾಗಿತ್ತು. ಇಂದು 7,311 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರವೂ ದರ ಕಳೆದ ವಾರ ಭಾರೀ ಏರಿಕೆಯಾಗಿ ಲಕ್ಷ ತಲುಪಿತ್ತು.. ಆದರೆ ಕಳೆದ ಎರಡು ದಿನಗಳಿಂದ ಬೆಳ್ಳಿ ದರವೂ ಏರಿಕೆ ಅಥವಾ ಇಳಿಕೆಯಾಗಿಲ್ಲ ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ.  ನಿನ್ನೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 1,00, 000 ರೂ.ಗೆ ಬಂದು ತಲುಪಿತ್ತು. ಇಂದೂ ಕೂಡಾ ಅದೇ ದರವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Rains: ಮುಂಗಾರು ಬಲು ಜೋರು ಎಂದು ಖುಷಿಪಡಬೇಡಿ, ಈ ಹವಾಮಾನ ವರದಿ ನೋಡಿ