Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ದರ ಇಂದು ಮತ್ತೆ ಭಾರೀ ಏರಿಕೆ

Gold
ಬೆಂಗಳೂರು: ಚಿನ್ನ ಖರೀದಿ ಮಾಡಬೇಕೆಂದಿರುವವರಿಗೆ ಇಂದು ಶಾಕಿಂಗ್ ಸುದ್ದಿ. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಲಕ್ಷದ ಗಡಿ ದಾಟಿಟ್ಟದ್ದ ಚಿನ್ನದ ದರ ಕಳೆದ ವಾರ ಕೊಂಚ ಇಳಿಕೆಯಾಗಿದ್ದರಿಂದ ಗ್ರಾಹಕರಿಗೆ ನೆಮ್ಮದಿಯಾಗಿತ್ತು. ಆದರೆ ಈ ವಾರದ ಆರಂಭದಿಂದಲೇ ಚಿನ್ನದ ದರ ಮತ್ತೆ ಏರುಗತಿಯಲ್ಲಿದೆ. ಮೊನ್ನೆಯಿಂದಲೂ ಚಿನ್ನದ ಏರಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಕೊಂಚ ಏರಿಕೆಯಾಗಿದ್ದು 98,540 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಮತ್ತೆ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 49 ರೂ. ಏರಿಕೆಯಾಗಿದ್ದು 9,791 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 45 ರೂ. ಏರಿಕೆಯಾಗಿದ್ದು 8,975 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 37 ರೂ. ಏರಿಕೆಯಾಗಿದ್ದು 7,344 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಏರಿಳಿತವಾಗುತ್ತಿತ್ತು.  ಇಂದು ಬೆಳ್ಳಿ ದರವೂ ಭಾರೀ ಏರಿಕೆಯಾಗಿದೆ.  ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ ಬರೋಬ್ಬರಿ 1000 ರೂ. ಏರಿಕೆಯಾಗಿದ್ದು ಇಂದು 1,01, 000 ರೂ.ಗೆ ಬಂದು ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Murshidabad ನಲ್ಲಿ ಹಿಂದೂಗಳ ಮೇಲೆ ದಾಳಿಯಾಗುತ್ತಿದ್ದರೆ ಮೂಕರಂತೆ ನಿಂತಿದ್ದ ಪೊಲೀಸರು