Select Your Language

Notifications

webdunia
webdunia
webdunia
webdunia

Gold Price today: ಮತ್ತೆ ಲಕ್ಷದತ್ತ ಚಿನ್ನದ ದರ

Gold
ಬೆಂಗಳೂರು: ಚಿನ್ನ ಖರೀದಿ ಮಾಡಬೇಕೆಂದಿದ್ದರೆ ನಿಮ್ಮ ಪ್ಲ್ಯಾನ್ ಮುಂದೂಡುವುದೇ ಉತ್ತಮ. ಮದುವೆ ಸೀಸನ್ ಆಗಿರುವುದರಿಂದ ಚಿನ್ನದ ದರ ಮತ್ತೆ ಲಕ್ಷದತ್ತ ದಾಪುಗಾಲಿಡುತ್ತಿದೆ. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಲಕ್ಷದ ಗಡಿ ದಾಟಿಟ್ಟದ್ದ ಚಿನ್ನದ ದರ ಕಳೆದ ವಾರ ಕೊಂಚ ಇಳಿಕೆಯಾಗಿದ್ದರಿಂದ ಗ್ರಾಹಕರಿಗೆ ನೆಮ್ಮದಿಯಾಗಿತ್ತು. ಆದರೆ ಈ ವಾರದ ಆರಂಭದಿಂದಲೇ ಚಿನ್ನದ ದರ ಮತ್ತೆ ಏರುಗತಿಯಲ್ಲಿದೆ. ಇದೀಗ ಮದುವೆ ಸೀಸನ್ ಆಗಿರುವುದರಿಂದ ಚಿನ್ನದ ದರವೂ ಗಗನಕ್ಕೇರುತ್ತಿದೆ. ಇಂದು ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿದ್ದು 99,035 ರೂ.ಗೆ ಬಂದು ನಿಂತಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚವೇ ಎನ್ನುವಷ್ಟು ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 38 ರೂ. ಇಳಿಕೆಯಾಗಿದ್ದು 9,753 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 35 ರೂ. ಇಳಿಕೆಯಾಗಿದ್ದು 8,940 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 29 ರೂ. ಇಳಿಕೆಯಾಗಿದ್ದು 7,319 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಖರೀದಿದಾರರಿಗೆ ಇಂದು ಸಮಾಧಾನಕರ ಸುದ್ದಿ..  ಇಂದು ಬೆಳ್ಳಿ ದರವೂ ತಕ್ಕ ಮಟ್ಟಿಗೆ ಇಳಿಕೆಯಾಗಿದೆ.  ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ ಬರೋಬ್ಬರಿ 1000 ರೂ. ಇಳಿಕೆಯಾಗಿದ್ದು ಇಂದು 1,00, 000 ರೂ.ಗೆ ಬಂದು ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Glance AI App: ಆನ್ ಲೈನ್ ನಲ್ಲಿ ಡ್ರೆಸ್ ಖರೀದಿಸುವಾಗ ಟ್ರಯಲ್ ನೋಡುವುದು ಇನ್ನು ಸುಲಭ