Select Your Language

Notifications

webdunia
webdunia
webdunia
webdunia

Gold price today: ಮತ್ತೆ ಲಕ್ಷದತ್ತ ಚಿನ್ನದ ದರ

Gold

Krishnaveni K

ಬೆಂಗಳೂರು , ಸೋಮವಾರ, 26 ಮೇ 2025 (10:58 IST)
ಬೆಂಗಳೂರು: ಪರಿಶುದ್ಧ ಚಿನ್ನದ ದರ ಇನ್ನೇನು ಲಕ್ಷದ ಗಡಿ ಮುಟ್ಟಿದೆ ಎನ್ನುವ ಸ್ಥಿತಿಯಲ್ಲಿದ್ದರೆ ಇತರೆ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಲು ಆರಂಭವಾಗಿತ್ತು. ಲಕ್ಷದ ಗಡಿ ತಲುಪಿದ್ದ ಚಿನ್ನದ ದರ ಈ ವಾರವೂ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಎಡವಿಬಿದ್ದರೆ ಲಕ್ಷವೇ ಎನ್ನುವ ಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದು. ಇಂದು ಪರಿಶುದ್ಧ ಚಿನ್ನದ ದರ 99,460 ರೂ.ಗೆ ಬಂದು ನಿಂತಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 44 ರೂ. ಇಳಿಕೆಯಾಗಿದ್ದು 9,764 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 40 ರೂ. ಇಳಿಕೆಯಾಗಿದ್ದು 8,950 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 33 ರೂ. ಇಳಿಕೆಯಾಗಿದ್ದು 7,323 ರೂ. ರಷ್ಟಾಗಿದೆ.


ಬೆಳ್ಳಿ ದರ
ಬೆಳ್ಳಿ ದರವೂ ದರ ಕಳೆದ ವಾರ ಭಾರೀ ಏರಿಕೆಯಾಗಿ ಲಕ್ಷ ತಲುಪಿತ್ತು.. ಇಂದು ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ.  ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 100 ರೂ. ಏರಿಕೆಯಾಗಿದ್ದು ಇಂದು 1,00, 000 ರೂ.ಗೆ ಬಂದು ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Vidhana soudha: ವಿಧಾನಸೌಧಕ್ಕೆ ಸಾರ್ವಜನಿಕರೂ ಪ್ರವೇಶಕ್ಕೆ ಅನುಮತಿ ಕೊಟ್ಟು ಟ್ವಿಸ್ಟ್ ಇಟ್ಟ ಸರ್ಕಾರ